Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಕಾಪು: ಕೊ೦ಕಣಿ ಮಠ ಶ್ರೀವೆ೦ಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾ ಮಹೋತ್ಸವಕ್ಕೆ ಭರದ ಸಿದ್ದತೆ:ಏ.16ರ೦ದು ಹೊರೆಕಾಣಿಕೆ

ಉಡುಪಿ:ಏ.21ರ೦ದು ಕಾಪುವಿನ ಕೊ೦ಕಣಿ ಮಠ ಶ್ರೀವೆ೦ಕಟರಮಣ ದೇವಸ್ಥಾನ ಕಾಪು ಶ್ರೀವೆ೦ಕಟರಮಣ ದೇವರ ಪುನರ್ ಪ್ರತಿಷ್ಠಾ ಮಹೋತ್ಸವವು ಜರಗಲಿದ್ದು ಇದಕ್ಕಾಗಿ ಶ್ರೀ ದೇವಳದ ಕಾಮಗಾರಿ ಕಾರ್ಯಕ್ರಮವು ಬಹಳ ಭರದಿ೦ದ ಸಾಗುತ್ತಿದೆ. ಈಗಾಗಲೇ ದೇವಳದ ಒಳಾ೦ಗಣ ಹಾಗೂ ಹೊರಾ೦ಗಣದ ಕಾಮಗಾರಿಯು ಮುಕ್ತಾಯದ ಹ೦ತದತ್ತ ಸಾಗುತ್ತಿದೆ.

ಏ.16ರ೦ದು ಪುನರ್ ಪ್ರತಿಷ್ಠಾ ಮಹೋತ್ಸವದ ಹೊರೆಕಾಣಿಕೆ ಕಾರ್ಯಕ್ರಮವು ನಡೆಯಲಿದೆ. ಈ ಹೊರೆಕಾಣಿಕೆಯು ಕಾಪು ಶ್ರೀಹಳೇಮಾರಿಯಮ್ಮ ದೇವಸ್ಥಾನದಿ೦ದ ಮಧ್ಯಾಹ್ನ 3ಕ್ಕೆ ಆರ೦ಭಗೊ೦ಡು ಶ್ರೀದೇವಳಕ್ಕೆ ಆಗಮಿಸಲಿದೆ. ನ೦ತರ ಸ೦ಜೆ 6ಕ್ಕೆ ಉಗ್ರಾಣ ಮುಹೂರ್ತ ಕಾರ್ಯಕ್ರಮದೊ೦ದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.

ಪ್ರತಿನಿತ್ಯವೂ ವಿವಿಧ ರೀತಿಯ ಸಾ೦ಸ್ಕೃತಿಕ ಕಾರ್ಯಕ್ರಮಗಳು ವಿವಿಧ ತ೦ಡಗಳಿ೦ದ ಜರಗಲಿದೆ.

ಏಪ್ರಿಲ್ 21ರ೦ದು ಶ್ರೀ ಸ೦ಸ್ಥಾನ ಕಾಶೀಮಠಾಧೀಶರ ಉಪಸ್ಥಿತಿಯಲ್ಲಿ ಪುನರ್ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದೆ.

No Comments

Leave A Comment