Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಉಪಚುನಾವಣೆ: ಹಿಮಾಚಲ ಪ್ರದೇಶ, ದೆಹಲಿ, ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಬಿಜೆಪಿ ಮುನ್ನಡೆ

ನವದೆಹಲಿ: ದೆಹಲಿ, ರಾಜಸ್ಥಾನ, ಹಿಮಾಚಲ ಪ್ರದೇಶದ ವಿಧಾನಸಭೆಗೆ ನಡೆದಿದ್ದ ಉಪಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.

ರಾಜ್ಯದ ನಂಜನಗೂಡು, ಗುಂಡ್ಲು ಪೇಟೆ ವಿಧಾನಸಭಾ ಕ್ಷೇತ್ರಗಳಂತೆಯೇ ದೆಹಲಿಯ ರಾಜೌರಿ  ಗಾರ್ಡನ್‌, ಜಾರ್ಖಂಡ್‌‌ನ ಲಿತಿಪರ್‌, ರಾಜಸ್ಥಾನ ಧೋಲ್ಪುರ್‌‌, ಪಶ್ವಿಮ ಬಂಗಾಳದ ಕಂತಿ ದಕ್ಷಿಣ್‌, ಮಧ್ಯಪ್ರದೇಶದ ಅತೆರ್ ಮತ್ತು ಬಂಧವ್‌ಘರ್‌‌, ಹಿಮಾಚಲ ಪ್ರದೇಶದ ಬೋರಂಜ್‌ ಮತ್ತು ಅಸ್ಸಾಂನ ಧೇಮೈ ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿದ್ದು, ಕರ್ನಾಟಕವನ್ನು ಹೊರತುಪಡಿಸಿ ಉಳಿದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.

ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಹರ್ಜೀತ್ ಸಿಂಗ್, ಕಾಂಗ್ರೆಸ್ ನ ಮೀನಾಕ್ಷಿ ಚಂಡೇಲಾ ಹಾಗೂ ಬಿಜೆಪಿ-ಎಸ್ಎಡಿ ಅಭ್ಯರ್ಥಿ ಮನ್ಜೀಂದರ್ ಸಿಂಗ್ ಸಿರ್ಸಾ ವಿಧಾನಸಭಾ ಉಪಚುನಾವಣೆಗೆ ಸ್ಪರ್ಧಿಸಿದ್ದರು. ಈ ಪೈಕಿ ಬಿಜೆಪಿ-ಎಸ್ಎಡಿ ಅಭ್ಯರ್ಥಿ ನಾಲ್ಕನೇ ಹಂತದ ಮತ ಎಣಿಕೆಯಲ್ಲೂ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಅಸ್ಸಾಂ ನಲ್ಲಿ ಧೇಮೈ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ 2,752 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದರೆ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ರಾಜಸ್ಥಾನಗಳಲ್ಲಿ ಬಿಜೆಪಿ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ. ಜಾರ್ಖಂಡ್ ನಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾದ ಅಭ್ಯರ್ಥಿ ಸಿಮೋನ್ ಮರಾಂಡಿ ಮುನ್ನಡೆಯಲ್ಲಿದ್ದಾರೆ.

No Comments

Leave A Comment