Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ದಿಡ್ಡಳ್ಳಿಯಲ್ಲಿ ಆದಿವಾಸಿಗಳ ನಿವಾಸಗಳ ಮೇಲೆ ಗುಂಡಿನ ದಾಳಿ

ಮಡಿಕೇರಿ: ನೆಲೆಗಾಗಿ ಬೆತ್ತಲೆ ಪ್ರತಿಭಟನೆ ಮಾಡಿ ರಾಜ್ಯದ ಗಮನ ಸೆಳೆದಿದ್ದ ಕೊಡಗಿನ  ದಿಡ್ಡಳ್ಳಿ ಆದಿವಾಸಿಗಳ ನಿವಾಸಗಳ ಮೇಲೆ ಅಪರಿಚಿತ ವ್ಯಕ್ತಿಗಳು ಸೋಮವಾರ ರಾತ್ರಿ ಗುಂಡಿನ ದಾಳಿ ನಡೆಸಿರುವ ಘಟನೆ ನಡೆದಿದ್ದು, ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಮಾಧ್ಯಮಗಳ ವರದಿ ತಿಳಿಸಿದೆ.

ಸೋಮವಾರ ತಡರಾತ್ರಿ ದಿಡ್ಡಳ್ಳಿ ಆದಿವಾಸಿಗಳ ನಿವಾಸಗಳ ಮೇಲೆ ದುಷ್ಕರ್ಮಿಗಳು ಮೂರು ಸುತ್ತು ಗುಂಡಿನ ದಾಳಿ ನಡೆಸಿದ್ದರು. ಸ್ಥಳದಲ್ಲಿ ಸಜೀವ ಗುಂಡು, 5 ವಿವಾದಾತ್ಮಕ ಕೈ ಬರಹಗಳ ಪತ್ರ ದೊರಕಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಬಂದೂಕು ದುರ್ಬಳಕೆ ಆರೋಪದಡಿ ಕೊಡಗಿನ ಸಿದ್ಧಾಪುರ ಠಾಣಾ ಪೊಲೀಸರು ಇದು ನಕ್ಸಲೀಯರ ಕೃತ್ಯ ಇರಬೇಕೆಂದು ಶಂಕಿಸಿದ್ದು, ಸ್ವಯಂಪ್ರೇರಿತವಾಗಿ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ 3 ಹಾಗೂ 25 ಎ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದಿಡ್ಡಳ್ಳಿ ಆದಿವಾಸಿಗಳಿಗೆ ಶೀಘ್ರವೇ ಹಕ್ಕುಪತ್ರ ನೀಡಲು ಸರ್ಕಾರ ನಿರ್ಧರಿಸಿರುವುದಾಗಿ ಮಂಗಳವಾರ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದರು.

 

No Comments

Leave A Comment