Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದ 118ನೇ ಭಜನಾ ಸಪ್ತಾಹದ ಆಮoತ್ರಣ ಪತ್ರಿಕೆ ಬಿಡುಗಡೆ-ಅಗಸ್ಟ್ 16ರಿ೦ದ ಭಜನಾ ಸಪ್ತಾಹ ಆರoಭ

ಎರಡನೇ ಸುತ್ತಿಗೆ ಪ್ರವೇಶ :ಸಿಂಗಪುರ ಸೂಪರ್‌ ಸರಣಿ ಬ್ಯಾಡ್ಮಿಂಟನ್‌ ಟೂರ್ನಿ: ಪಿ.ವಿ. ಸಿಂಧು ಶುಭಾರಂಭ

ಸಿಂಗಪುರ: ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿಯ ಸಾಧನೆ ಮಾಡಿರುವ ಪಿ.ವಿ. ಸಿಂಧು ಅವರು ಬುಧವಾರ ನಡೆದ ಸಿಂಗಪುರ ಸೂಪರ್‌ ಸರಣಿ ಬ್ಯಾಡ್ಮಿಂಟನ್‌ ಟೂರ್ನಿಯ ಮೊದಲ ಸುತ್ತಿನಲ್ಲಿ ಜಪಾನ್‌ನ ನೊಜೊಮಿ ಒಕುಹರಾ ಎದುರು ಜಯ ಸಾಧಿಸಿದ್ದಾರೆ.

ಮೊದಲ ಸುತ್ತಿನಲ್ಲಿ 10–21, 21–15,22–20 ಸೆಟ್‌ಗಳ ಅಂತರದಲ್ಲಿ ಜಪಾನ್‌ನ ನೊಜೊಮಿ ಒಕುಹರಾ ಮಣಿಸುವ ಮೂಲಕ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದ ಅನುಭವಿ ಆಟಗಾರ್ತಿ ಸೈನಾ ನೆಹ್ವಾಲ್‌ ಟೂರ್ನಿಯಿಂದ ಹಿಂದೆ ಸರಿದಿದ್ದು, ಸಿಂಧು ಮೇಲೆ ನಿರೀಕ್ಷೆ ಹೆಚ್ಚಿದೆ.

No Comments

Leave A Comment