Log In
BREAKING NEWS >
ಉಡುಪಿ:ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಮಹೋತ್ಸವದ ಶುಭಾರoಭಕ್ಕೆ ಕ್ಷಣಗಣನೆ....ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ;೧೧೮ನೇ ಭಜನಾ ಸಪ್ತಾಹ ಮಹೋತ್ಸವದ 1`ದಿನ ಶ್ರೀದೇವರಿಗೆ ಮತ್ಸ್ಯಲoಕಾರ

ಏ.15ರ೦ದು ಗಲ್ಫ್ ಕನ್ನಡಿಗ ಬಿ.ಜಿ. ಮೋಹನ್‍ದಾಸ್‍ರವರ ಕುರಿತಾದ ಕೃತಿ ಬಿಡುಗಡೆ…

ಉಡುಪಿ: 80ರ ದಶಕದ ಆದಿಯಲ್ಲಿ ಮಣಿಪಾಲದಿಂದ ಗಲ್ಪ್ ಸೇರಿದ ಬಿ.ಜಿ. ಮೋಹನ್‍ದಾಸ್‍ರ ವರು ಯು.ಎ.ಇ.ಯ ದುಬೈಯಲ್ಲಿ ಗಲ್ಫ್ ಕನ್ನಡಿಗರನ್ನು ಸಂಘಟಿಸಿ ಕರ್ನಾಟಕ ಸಂಘವನ್ನು ಕಟ್ಟಿದವರಲ್ಲೊಬ್ಬರು.ದುಬೈ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಕನ್ನಡದ ತನ್ನ ಹಲವಾರು ಕಾರ್ಯಕ್ರಮಗಳ ಮೂಲಕ ಕನ್ನಡ ಭಾಷೆಗೆ ಸೇವೆ ಸಲ್ಲಿಸಿದವರು. ಸುಮಾರು 40 ವರ್ಷಗಳ ನಿರಂತರ ಸಾಹಿತ್ಯ ಸಂಸ್ಕೃತಿ ಸಮಾಜ ಸೇವೆಯ ಮೂಲಕ ಜನಮನ ಗೆದ್ದವರು. ಅವರು ಹುಟ್ಟುಹಾಕಿದ ಗಲ್ಫ್ ಕನ್ನಡಿಗ.ಕಾಮ್ ವೆಬ್‍ಸೈಟ್ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದಿದೆ.

‘ನಾಡಿಗೆ ನಮಸ್ಕಾರ’ ಎನ್ನುವ ಕಾಂತಾವರ ಕನ್ನಡ ಸಂಘದ ಗ್ರಂಥಮಾಲೆ ವಿಶೇಷವಾಗಿ ಕನ್ನಡ ಭಾಷೆ ಮತ್ತು ಕಲೆಗೆ ನೀಡಿದ ವ್ಯಕ್ತಿಗಳ ಸೇವೆಯನ್ನು ಗುರುತಿಸಿ, ಅವರ ಬಗ್ಗೆ ಕೃತಿ ರಚಿಸಿ ಬಿಡುಗಡೆಗೊಳಿಸುವ ಕೆಲಸ ಸುಮಾರು ಮೂವತ್ತು ವರ್ಷಗಳಿಂದ ನಡೆಯುತ್ತಿದ್ದು ಈ ಬಾರಿಯ ವ್ಯಕ್ತಿ ಆಯ್ಕೆಗಳಲ್ಲಿ ಗಲ್ಫ್ ಕನ್ನಡಿಗ ಬಿ.ಜಿ. ಮೋಹನ್‍ರವರು ಕೂಡ ಒಬ್ಬರು.

ಅವರ ಬಗ್ಗೆ ಕೃತಿಯನ್ನು ರಚಿಸಿದವರು ಸಾಹಿತಿ ಅಂಶುಮಾಲಿಯವರು. ಕೃತಿ ಅನಾವರಣ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಉಡುಪಿಯ ಸುಹಾಸಂರವರು ತಾ. 15.04.2017 ಶನಿವಾರದಂದು ಬೆಳಿಗ್ಗೆ 11-00 ಗಂಟೆಗೆ ಕಿದಿಯೂರು ಹೋಟೆಲ್‍ನ ಮಹಾಜನ ಸಭಾಭವನದಲ್ಲಿ ಸಾದರಪಡಿಸುತ್ತಿದ್ದಾರೆ. ಮಾಜಿ ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್‍ರವರು ಕೃತಿ ಅನಾವರಣ ಮಾಡಿ ಅಭಿನಂದಿಸಲಿದ್ದಾರೆ.

ಕಾರ್ಯಕ್ರಮದ ಅತಿಥಿಗಳಾಗಿ ಕಾಂತಾವರ ಕರ್ನಾಟಕ ಸಂಘದ ಅಧ್ಯಕ್ಷರಾದ ಸಾಹಿತಿ ಡಾ. ನಾ. ಮೊಗಸಾಲೆ, ನಿವೃತ್ತ ಪತ್ರಿಕಾ ಸಂಪಾದಕ ಎನ್. ಗುರುರಾಜ್, ಸಾಹಿತಿ ಅಂಶುಮಾಲಿ, ಸುಹಾಸಂನ ಅಧ್ಯಕ್ಷರಾದ ಎಚ್. ಶಾಂತರಾಜ್ ಐತಾಳ್ ಹಾಗೂ ಕಾರ್ಯದರ್ಶಿ ಎಚ್. ಗೋಪಾಲ ಭಟ್ಟ (ಕು.ಗೋ.) ಭಾಗವಹಿಸಲಿದ್ದಾರೆ.

No Comments

Leave A Comment