Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ "ಚ೦ಡಿಕಾ ಹೋಮ " ಕಾರ್ಯಕ್ರಮವು 19-10-2018ರ೦ದು ಜರಗಲಿದೆ....

ಬಳ್ಳಾರಿಯಲ್ಲಿ ತೀವ್ರಗೊಂಡ ಬಿಸಿಲು: ನಿರ್ಜಲೀಕರಣ ಸಮಸ್ಯೆ ವಿಮ್ಸ್‌ ಆಸ್ಪತ್ರೆಗೆ 88 ಹಸುಳೆಗಳು ದಾಖಲು

ಬಳ್ಳಾರಿ: ಬಿಸಿಲಿನ ತಾಪಮಾನದಲ್ಲಿ ಹೆಚ್ಚಳ ಉಂಟಾಗಿ, ನಿರ್ಜಲೀಕರಣದಿಂದ ಬಳಲಿದ ಜಿಲ್ಲೆಯ ಹಾಗೂ ಆಂಧ್ರಪ್ರದೇಶದ 88 ಹಸುಳೆಗಳನ್ನು ಇಲ್ಲಿನ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್‌) ಆಸ್ಪತ್ರೆಗೆ ದಾಖಲಿಸಲಾಗಿದೆ. ಅವೆಲ್ಲವೂ ಒಂದು ತಿಂಗಳ ಒಳಗಿರುವ ನವಜಾತ ಶಿಶುಗಳು.

ಬಳ್ಳಾರಿ ನಗರ, ಗ್ರಾಮೀಣ ಪ್ರದೇಶ, ಸಂಡೂರು, ಸಿರುಗುಪ್ಪ ತಾಲ್ಲೂಕು ಹಾಗೂ ಆಂಧ್ರಪ್ರದೇಶದ ಉರವಕೊಂಡ ಗ್ರಾಮದಿಂದಲೂ ಮಕ್ಕಳನ್ನು ದಾಖಲಿಸಲಾಗಿದೆ. ಇದೇ ತಿಂಗಳ 1ರಿಂದ 9ರ ವರೆಗೆ 70 ಕೂಸುಗಳು ದಾಖಲಾಗಿದ್ದವು. ಸೋಮವಾರ ಒಂದೇ ದಿನ ಹತ್ತು ಶಿಶುಗಳನ್ನು ದಾಖಲು ಮಾಡಿಕೊಳ್ಳಲಾಗಿತ್ತು. ಮಂಗಳವಾರ ಎಂಟು ಮಕ್ಕಳನ್ನು ದಾಖಲಿಸಿಕೊಳ್ಳಲಾಗಿದೆ. ಯಾವುದೇ ಮಗುವೂ ಚಿಂತಾಜನಕ ಸ್ಥಿತಿಯಲ್ಲಿ ಇಲ್ಲ’ ಎಂದು ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಎಂ.ಲಕ್ಷ್ಮಿನಾರಾಯಣ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಮಕ್ಕಳ ಅಳು, ನಿರ್ಜಲೀಕರಣದ ಮೊದಲ ಹಾಗೂ ಮುಖ್ಯ ಲಕ್ಷಣ, ಅದನ್ನು ಗಮನಿಸಬೇಕು. ದಿನಕ್ಕೆ ಆರೆಂಟು ಬಾರಿ ಮೂತ್ರ ವಿಸರ್ಜಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಇಲ್ಲವಾದರೆ ಕೂಡಲೇ ಆಸ್ಪತ್ರೆಗೆ ಕರೆ ತರಬೇಕು’ ಎಂದು  ಸಲಹೆ ನೀಡಿದರು.

ವೈದ್ಯರ ಸಲಹೆ
‘ನಿರ್ಜಲೀಕರಣದಿಂದ ದೇಹದ ಉಷ್ಣಾಂಶವೂ ಹೆಚ್ಚುವುದರಿಂದ, ಅದನ್ನು ತಡೆದುಕೊಳ್ಳುವ ಶಕ್ತಿ ಕೂಸುಗಳಲ್ಲಿರುವುದಿಲ್ಲ. ಅದರಿಂದ ಮೂತ್ರಪಿಂಡಗಳಿಗೂಹಾನಿಯಾಗಿ ಸಾವನ್ನಪ್ಪುವ ಸಾಧ್ಯತೆಯೂ ಇರುತ್ತದೆ’ ಎನ್ನುತ್ತಾರೆ ವೈದ್ಯರು.

ಬಾಣಂತಿಯರು ಹೆಚ್ಚು ನೀರಿನ ಅಂಶವಿರುವ ಆಹಾರ ಮತ್ತು ಪಾನೀಯ ಸೇವಿಸಬೇಕು. ಎದೆಹಾಲಿನ ಉತ್ಪತ್ತಿ ಕಡಿಮೆಯಾದರೆ ಮಕ್ಕಳಲ್ಲಿ ನಿರ್ಜಲೀಕರಣ ಸಮಸ್ಯೆ ತಲೆದೋರುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳೂ ಸೇರಿದಂತೆ, ಜಿಲ್ಲೆಯಲ್ಲಿ ಹೆರಿಗೆಯಾದ ಕೆಲವೇ ದಿನಗಳಿಗೆ ಬಾಣಂತಿಯರನ್ನು ವೈದ್ಯರು ಮನೆಗೆ ಕಳಿಸಬಾರದು’ ಎನ್ನುತ್ತಾರೆ ಡಾ.ರೆಡ್ಡಿ.

No Comments

Leave A Comment