Log In
BREAKING NEWS >
2020 ಮು೦ದಿನ ಪರ್ಯಾಯ ಮಹೋತ್ಸವವನ್ನು ನೆರವೇರಿಸಲಿರುವ ಶ್ರೀಅದಮಾರು ಮಠದ ಪರ್ಯಾಯಕ್ಕೆ ಶುಕ್ರವಾರದ೦ದು ಬಾಳೆ ಮಹೂರ್ತ-ಬೆಳಿಗ್ಗೆ 7.30ಕ್ಕೆ

ಪತ್ನಿಯ ಸ್ಫೂರ್ತಿಯ ಮಾತುಗಳು ಪಂಜಾಬ್ ವಿರುದ್ಧ ಆರ್ಭಟಿಸಲು ಕಾರಣ: ಎಬಿಡಿ

ಇಂದೋರ್: ಪಂಜಾಬ್ ವಿರುದ್ಧದ ನಾನು ಅರ್ಭಟಿಸಲು ನನ್ನ ಪತ್ನಿಯ ಸ್ಫೂರ್ತಿಯ ಮಾತುಗಳೇ ಕಾರಣ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಎಬಿಡಿ ವಿಲಿಯರ್ಸ್ ಹೇಳಿದ್ದಾರೆ.

ಗಾಯದ ಸಮಸ್ಯೆಯಿಂದಾಗಿ ಇಂಡಿಯನ್ ಪ್ರಿಮಿಯಲ್ ಲೀಗ್(ಆರ್ಸಿಬಿ) 10ನೇ ಆವೃತ್ತಿಯ ಮೊದಲೆರೆಡು ಪಂದ್ಯಗಳಿಂದ ನಾನು ದೂರ ಉಳಿದಿದ್ದೆ. ನಂತರ ಪಂಜಾಬ್ ವಿರುದ್ಧ ಮೂರನೇ ಪಂದ್ಯದ ಮೂಲಕ ಕಣಕ್ಕಿಳಿದಿದ್ದು ಈ ವೇಳೆ ನನ್ನ ಮೇಲೆಯೇ ನನಗೆ ಅನುಮಾನಗಳಿದ್ದವು. ಆಗ ಪತ್ನಿಯ ಕರೆ ನನ್ನ ಆಟಕ್ಕೆ ಸ್ಫೂರ್ತಿ ತುಂಬಿತು ಎಂದು ಹೇಳಿದ್ದಾರೆ.

ಪಂದ್ಯಕ್ಕೂ ಮುನ್ನ ನಾನು ಪತ್ನಿಗೆ ಕರೆ ಮಾಡಿ ನಿನ್ನ ಸಲಹೆ ಬೇಕಿದೆ ಎಂದೆ. ಮಗುವನ್ನು ಆರೈಕೆ ಮಾಡುತ್ತಿದ್ದ ಆಕೆ ಕೆಲ ಸಮಯ ಬಿಟ್ಟು ಕರೆ ಮಾಡುವುದಾಗಿ ತಿಳಿಸಿದಳು. ಬಳಿಕ ಕರೆ ಮಾಡಿ ಆಕೆ ನನಗೆ ಏನನ್ನೂ ಯೋಚಿಸದೆ ತಾಳ್ಮೆಯಿಂದ ಆಟವಾಡು ಎಂದು ಹೇಳಿದ್ದಳು. ಇದೇ ನನ್ನ ಆಟಕ್ಕೆ ಸ್ಫೂರ್ತಿ ತುಂಬಿತು ಎಂದು ಎಬಿಡಿ ತಿಳಿಸಿದ್ದಾರೆ.

No Comments

Leave A Comment