Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಫ್ಯಾಶನ್-೨ ನಿರಾಕರಿಸಿದ ಕಂಗನಾ ರಣಾವತ್?

ಮೂಲಗಳ ಪ್ರಕಾರ ಇತ್ತೀಚೆಗಷ್ಟೇ ನಿರ್ದೇಶಕ ಮಧುರ್ ಭಂಡಾರ್ಕರ್ ಫ್ಯಾಷನ್-೨ ಸ್ಕ್ರಿಪ್ಟ್ ಹಿಡಿದು ನಟಿ ಕಂಗನಾ ರಣಾವತ್ ಅವರನ್ನು ಭೇಟಿ ಮಾಡಿದ್ದಾರೆ ಆದರೆ ಸ್ಕ್ರಿಪ್ಟ್ ತಮಗೆ ಹಿಡಿಸಿಲ್ಲ ಎಂದು ತಿಳಿಸಿರುವ ನಟಿ ಸಿನೆಮಾದ ಭಾಗವಾಗಲು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಎರಡು ವರ್ಷಗಳ ಹಿಂದೆ ಭಂಡಾರ್ಕರ್ ಫ್ಯಾಷನ್ ಎರಡನೇ ಭಾಗ ನಿರ್ದೇಶಿಸಲು ಯೋಜನೆ ರೂಪಿಸುತ್ತಿದ್ದಾರೆ ಎಂದು ವರದಿಯಾಗಿತ್ತು ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಅದರಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು.

ಫ್ಯಾಷನ್ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಕಂಗನಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾ ವಿಮರ್ಶಕರ ಮೆಚ್ಚುಗೆ ಗಳಿಸಿದ್ದಲ್ಲದೆ, ಬಾಕ್ಸ್ ಆಫಿಸ್ ನಲ್ಲಿ ಕೂಡ ಉತ್ತಮ ಗಳಿಕೆ ಕಂಡಿತ್ತು.

ಈಗ ಕಂಗನಾ ಈ ಪಾತ್ರವನ್ನು ನಿರಾಕರಿಸಿದ್ದು, ಅದೇ ಪಾತ್ರಕ್ಕೆ ಭಂಡಾರ್ಕರ್ ಪ್ರಿಯಾಂಕಾ ಚೋಪ್ರಾ ಅವರ ಮೊರೆ ಹೋಗಲಿದ್ದಾರೆಯೇ ಎಂಬ ಪ್ರಶ್ನೆಗಳು ಬಾಲಿವುಡ್ ನಗರಿಯಲ್ಲಿ ಕೇಳಿಬರುತ್ತಿವೆ.

No Comments

Leave A Comment