Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ರಸ್ತೆ ಬದಿ ಟೀ ಕುಡಿಯುತ್ತಿದ್ದವರ ಮೇಲೆ ಮರ ಬಿದ್ದು ಇಬ್ಬರ ದಾರುಣ ಸಾವು

ಹುಣಸೂರು: ರಸ್ತೆ ಬದಿ ಬೃಹತ್‌ ಆಲದ ಮರ ಬಿದ್ದು ಇಬ್ಬರು ದಾರುಣವಾಗಿ ಸಾವನ್ನಪ್ಪಿ ಓರ್ವ ಗಂಭೀರವಾಗಿ ಗಾಯಗೊಂಡಿರುವ ಅವಘಡ ಅಜಾದ್‌ನಗರದ ಎಚ್‌.ಡಿ.ಕೋಟೆ  ರಸ್ತೆಯಲ್ಲಿ  ಮಂಗಳವಾರ ಬೆಳಗ್ಗೆ ನಡೆದಿದೆ.

ಬಟ್ಟೆ ವ್ಯಾಪಾರಕ್ಕೆ ತೆರಳುತ್ತಿದ್ದ ಮೂವರು ರಸ್ತೆ ಬದಿಯಲ್ಲಿ ಚಹಾ ಕುಡಿಯಲು ಕ್ಯಾಂಟೀನ್‌ ಬಳಿ ನಿಂತಿದ್ದಾಗ ಏಕಾಏಕಿ ಗಾಳಿಗೆ ಬೃಹತ್‌ ಆಲದ ಮರ ಬಿದ್ದಿದೆ. ಪರಿಣಾಮವಾಗಿ ಚಿಕ್ಕಹುಣಸೂರಿನ ಮಹೇಶ್‌ (40)ಮತ್ತು ರಾಚೇನಹಳ್ಳಿಯ ಪ್ರಕಾಶ್‌ (25)ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ನಜೀಬ್‌ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹುಣಸೂರು ಪೊಲೀಸರು ಸ್ಥಳಕ್ಕಾಗಮಿಸಿ ಮರವನ್ನು ತೆರವುಗೊಳಿಸಿದ್ದಾರೆ.

No Comments

Leave A Comment