ಬಾಂಬ್ ಸ್ಫೋಟದ ಹಿನ್ನೆಲೆ- ಈಜಿಪ್ಟ್ನಲ್ಲಿ 3ತಿಂಗಳ ತುರ್ತು ಪರಿಸ್ಥಿತಿ ಘೋಷಿಸಿದ ಅಧ್ಯಕ್ಷ ಅಲ್–ಸಿಸಿಕೈರೋ: ಈಜಿಪ್ಟ್ನ ಚರ್ಚ್ಗಳಲ್ಲಿ ಬಾಂಬ್ ಸ್ಫೋಟಿಸಿ 45 ಜನರು ಸಾವೀಗೀಡಾಗಿದ್ದು, ಅಧ್ಯಕ್ಷ ಅಬ್ದೆಲ್ ಫತಾಹ್ ಅಲ್–ಸಿಸಿ ಮೂರು ತಿಂಗಳ ತುರ್ತು ಪರಿಸ್ಥಿತಿ ಘೋಷಿಸಿದರು.ಟಂಟಾ ಮತ್ತು ಅಲೆಕ್ಸಾಂಡ್ರಿಯಾ ಪಟ್ಟಣದ ಚರ್ಚ್ಗಳಲ್ಲಿ ನಡೆದ ಸ್ಫೋಟದ ಹೊಣೆಯನ್ನು ಐಎಸ್ (ಇಸ್ಲಾಮಿಕ್ ಸ್ಟೇಟ್)ಉಗ್ರರು ಹೊತ್ತಿದ್ದಾರೆ. ರಾಷ್ಟ್ರೀಯ ರಕ್ಷಣಾ ಮಂಡಳಿಯೊಂದಿಗೆ ಸಭೆ ನಡೆಸಿದ ಬಳಿಕ ದೇಶದ ಭದ್ರತಾ ದೃಷ್ಟಿಯಿಂದ 3 ತಿಂಗಳು ತುರ್ತು ಪರಿಸ್ಥಿತಿ ಘೋಷಿಸಿದರು.ಭಾನುವಾರ ನಡೆಸಿದ ಬಾಂಬ್ ಸ್ಫೋಟಗಳಲ್ಲಿ ಕನಿಷ್ಠ 45 ಮಂದಿ ಮೃತಪಟ್ಟು, 119ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.ಏ. 28,29 ರಂದು ಪೋಪ್ ಫ್ರಾನ್ಸಿಸ್ ಅವರ ಈಜಿಪ್ಟ್ ಭೇಟಿ ನಿಗದಿಯಾಗಿದ್ದು, ಇದಕ್ಕೂ ಮುನ್ನ ಐಸ್ ಉಗ್ರರರು ಅವಳಿ ಸ್ಫೋಟ ನಡೆಸಿದ್ದಾರೆ. ಡಿಸೆಂಬರ್ನಲ್ಲಿ ಕೈರೋದ ಚರ್ಚ್ನಲ್ಲಿ ಬಾಂಬ್ ಸ್ಫೋಟ ನಡೆದಿತ್ತು.2013ರಲ್ಲಿ ಇಲ್ಲಿನ 40ಕ್ಕೂ ಹೆಚ್ಚು ಚರ್ಚ್ಗಳ ಮೇಲೆ ದಾಳಿ ನಡೆದಿರುವ ಕುರಿತು ವರದಿಯಾಗಿತ್ತು.