Log In
BREAKING NEWS >
2020 ಮು೦ದಿನ ಪರ್ಯಾಯ ಮಹೋತ್ಸವವನ್ನು ನೆರವೇರಿಸಲಿರುವ ಶ್ರೀಅದಮಾರು ಮಠದ ಪರ್ಯಾಯಕ್ಕೆ ಶುಕ್ರವಾರದ೦ದು ಬಾಳೆ ಮಹೂರ್ತ-ಬೆಳಿಗ್ಗೆ 7.30ಕ್ಕೆ

ಅಮೆರಿಕದಲ್ಲಿ ಮತ್ತೆ ಭಾರತೀಯನ ಮೇಲೆ ದಾಳಿ; ಗುಂಡೇಟಿಗೆ ಓರ್ವ ಬಲಿ!

ವಾಷಿಂಗ್ಟನ್: ಅಮೆರಿಕದಲ್ಲಿ ಮತ್ತೆ ಭಾರತೀಯರ ದಾಳಿಯಾಗಿದ್ದು, ಮುಸುಕುಧಾರಿ ವ್ಯಕ್ತಿಗಳು ನಡೆಸಿದ ಗುಂಡಿನ ದಾಳಿಗೆ ಭಾರತೀಯ ಮೂಲದ ವಿಕ್ರಮ್ ಜರ್ಯಾಲ್ ಎಂಬುವವರು ಸಾವನ್ನಪ್ಪಿದ್ದಾರೆ.

ಅಮೆರಿಕದ ವಾಷಿಂಗ್ಟನ್ ಸಮೀಪದ ಯಾಕಿಮಾ ನಗರದಲ್ಲಿ ಗ್ಯಾಸ್ ಬಂಕ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಭಾರತದ ಪಂಜಾಬ್ ನ ಹಶಿಯಾರ್ಪುರ ಮೂಲದ 28 ವರ್ಷದ ವಿಕ್ರಮ್ ಜರ್ಯಾಲ್ ಎಂಬ ಯುವಕನ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಮೂಲಗಳ ಪ್ರಕಾರ ವಿಕ್ರಮ್ ಜರ್ಯಾಲ್ ಕೇವಲ 25 ದಿನಗಳ ಹಿಂದಷ್ಟೇ ಅಮೆರಿಕಕ್ಕೆ ತೆರಳಿದ್ದರು. ತಮ್ಮ ಕುಟುಂಬಸ್ಥರದ್ದೇ ಆದ ಗ್ಯಾಸ್ ಬಂಕ್ ನಲ್ಲಿ ವಿಕ್ರಮ್ ಕೆಲಸ ಮಾಡುತ್ತಿದ್ದರು. ಯಾಕಿಮಾ ನಗರದಲ್ಲಿನ ಎಎಂ-ಪಿಎಂ ಎಂಬ ಗ್ಯಾಸ್ ಬಂಕ್ ನಲ್ಲಿ ವಿಕ್ರಮ್ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು.

ಇದೇ ಗುರುವಾರ ರಾತ್ರಿ ಸುಮಾರು 1.30ರ ಸುಮಾರಿನಲ್ಲಿ ಗ್ಯಾಸ್ ಬಂಕ್ ನಲ್ಲಿ ವಿಕ್ರಮ್ ಕೆಲಸ ಮಾಡುತ್ತಿದ್ದ ವೇಳೆ ಅಲ್ಲಿಗೆ ಬಂದ ಮುಸುಕುಧಾರಿ ದುಷ್ಕರ್ಮಿಗಳು ವಿಕ್ರಮ್ ಜರ್ಯಾಲ್ ರನ್ನು ಬೆದರಿಸಿ ಗ್ಯಾಸ್ ಬಂಕ್ ನಲ್ಲಿದ್ದ ಹಣವನ್ನು  ದರೋಡೆ ಮಾಡಿದ್ದಾರೆ. ಬಳಿಕ ಆತನ ಎದೆಗೆ ಎರಡು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಪರಿಣಾಮ ವಿಕ್ರಮ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಪ್ರಸ್ತುತ ಪ್ರಕರಣ  ದಾಖಲಿಸಿಕೊಂಡಿರುವ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ವಿಡಿಯೋಗಳನ್ನು ಕಲೆಹಾಕಿದ್ದು, ತನಿಖೆ ಮುಂದುವರೆಸಿದ್ದಾರೆ.

No Comments

Leave A Comment