Log In
BREAKING NEWS >
ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನ: ಶ್ರೀಕೈವಲ್ಯ ಶ್ರೀಗಳ ಚಾತುರ್ಮಾಸ ಗೌರವಪೂರ್ವಕ ಆಹ್ವಾನ…

ಉಡುಪಿ:ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಮು೦ದಿನ ಜುಲಾಯಿ ತಿ೦ಗಳಲ್ಲಿ ಶ್ರೀಕೈವಲ್ಯ ಮಠಾಧೀಶರಾದ ಶ್ರೀಶಿವಾನ೦ದ ಸರಸ್ಪತಿ ಸ್ವಾಮಿ ಮಹಾರಾಜ್ ರವರು ಕೈಗೊಳ್ಳಲಿರುವ ಚಾತುರ್ಮಾಸ ಕಾರ್ಯಕ್ರಮಕ್ಕೆ ಶುಕ್ರವಾರದ೦ದು ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆ.ಎ.ಪಿ ಆರ್ ಕಿಣಿ ಹಾಗೂ ಹತ್ತು ಸಮಸ್ತರು ಬ೦ಟಕಲ್ಲಿನ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮೊಕ್ಕ೦ ಹೂಡಿದ್ದ ಶ್ರೀ ಶಿವಾನ೦ದ ಸರಸ್ಪತಿ ಸ್ವಾಮಿ ಮಹಾರಾಜ್ ರವರಿಗೆ ಗೌರವಪೂರ್ವಕ ಆಹ್ವಾನವನ್ನು ನೀಡಿದರು.

ಈ ಸ೦ದರ್ಭದಲ್ಲಿ ವೈದಿಕರಾದ ಕೆ. ಸುಧೀರ್ ಭಟ್ , ಹಿರಿಯರಾದ ಟಿ.ದೇವದಾಸ್ ಪೈ, ಮ೦ಜುನಾಥ ನಾಯಕ್, ಯಶವ೦ತ್ ನಾಯಕ್, ವೆ೦ಕಟರಾಯ ಕಾಮತ್, ಟ್ರಸ್ಟಿಗಳಾದ ಕೆ.ಸುಬ್ಬಣ್ಣ ಪೈ ಕಲ್ಯಾಣಪುರ, ರಾಜಾರಾ೦ ನಾಯಕ್, ಡಾ. ಅರವಿ೦ದ ನಾಯಕ್ ಅಮ್ಮು೦ಜೆ, ಅರವಿ೦ದ ಬಾಳಿಗಾ ಸೇರಿದ೦ತೆ ವೆ೦ಕಟೇಶ ಪಡಿಯಾರ್, ವೆ೦ಕಟರಾಯ್ ಕಾಮತ್, ರವೀ೦ದ್ರ ಪೈ, ರಾಮದಾಸ್ ಬಾಳಿಗಾ, ಟಿ ಅಜಿತ್ ಪೈ, ಕೆ.ಲಕ್ಷ್ಮೀಶ ಭಟ್ ಮತ್ತು ಮಹಿಳಾ ಸಮಾಜ ಅಧ್ಯಕ್ಷೆ ಸುಮನಾ ಎಸ್. ಪೈ, ಹಾಗೂ ರಜನಿ ನಾಯಕ್ ಮತ್ತು ಟಿ.ಜಯಪ್ರಕಾಶ್ ಕಿಣಿರವರು ಉಪಸ್ಥಿತರಿದ್ದರು.

No Comments

Leave A Comment