Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ವಿಜಯ್ ಮಲ್ಯರ ಕಿಂಗ್ ಫಿಷರ್ ವಿಲ್ಲಾ ಖರೀದಿಸಿದ ನಟ-ಉದ್ಯಮಿ ಸಚಿನ್ ಜೋಷಿ

ಮುಂಬೈ: ಮುಂಬೈ ನಲ್ಲಿರುವ ವಿಜಯ್ ಮಲ್ಯ ಅವರ ಕಿಂಗ್ ಫಿಷರ್ ವಿಲ್ಲಾ ಕೊನೆಗೂ ಹರಾಜಾಗಿದ್ದು, ನಟ-ಉದ್ಯಮಿ ಸಚಿನ್ ಜೋಷಿ ವಿಲ್ಲಾವನ್ನು ಖರೀದಿಸಿದ್ದಾರೆ. ಹರಾಜು ಪ್ರಕ್ರಿಯೆ ವೇಳೆ ನಿಗದಿಪಡಿಸಿದ್ದ ಪ್ರಾರಂಭಿಕ ದರ 73 ಕೋಟಿಗಿಂತ ಸ್ವಲ್ಪ ಹೆಚ್ಚಿನ ದರಕ್ಕೆ ಸಚಿನ್ ಜೋಷಿ ವಿಲ್ಲಾವನ್ನು ಖರೀದಿಸಿದ್ದಾರೆ.

ಜೀಂಜೆ ಗ್ರೂಪ್ ಆಫ್ ಕಂಪನೀಸ್ ನ ಉಪಾಧ್ಯಕ್ಷರೂ ಆಗಿರುವ ಸಚಿನ್ ಜೋಷಿ, ಫಿಟ್ ನೆಸ್ ಕೇಂದ್ರದಿಂದ ಹಿಡಿದು ಹೆಲ್ತ್ ಸ್ಪೇಸ್ ವರೆಗೂ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ನಟನೆಯಲ್ಲೂ ಸಚಿನ್ ಜೋಷಿ ತಮ್ಮನ್ನು ತೊಡಗಿಸಿಕೊಂಡಿದ್ದು, ಆಜಾನ್, ಮುಂಬೈ ಮಿರರ್ ಹಾಗೂ ಜಾಕ್ ಪಾಟ್ ಸೇರಿದಂತೆ ಹಲವು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ.

ಈ ಹಿಂದೆಯೂ ಎಸ್ ಬಿಐ ಮುಂಬೈ ನಲ್ಲಿರುವ ವಿಜಯ್ ಮಲ್ಯ ಅವರ ವಿಲ್ಲಾ ಹರಾಜು ಹಾಕಿತ್ತಾದರೂ ಖರೀದಿಸುವವರಿಲ್ಲದೇ ಹರಾಜು ಪ್ರಕ್ರಿಯೆ ವಿಫಲವಾಗಿತ್ತು. ವಿಜಯ್ ಮಲ್ಯ ಅವರು ಬ್ಯಾಂಕ್ ಗಳಿಂದ ಪಡೆದಿರುವ ಸಾಲದ ಮೊತ್ತವನ್ನು ಮರು ಪಾವತಿ ಮಾಡಲು ಸಾಧ್ಯವಾಗದೇ ಸುಸ್ತಿದಾರರಾಗಿರುವ ಹಿನ್ನೆಲೆಯಲ್ಲಿ ವಿಜಯ್ ಮಲ್ಯ ಅವರ ಮುಂಬೈ ಹಾಗೂ ಗೋವಾದಲ್ಲಿರುವ ವಿಲ್ಲಾಗಳನ್ನು ಹರಾಜು ಹಾಕಲಾಗಿದ್ದು, ಮುಂಬೈ ವಿಲ್ಲಾ ಖರೀದಿಯಾಗಿದೆ.

No Comments

Leave A Comment