Log In
BREAKING NEWS >
ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 30 ಮತ್ತು 31ರಂದು ಬ್ಯಾಂಕ್‌ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ....

ಪುತ್ತೂರು ಮಹಾಲಿಂಗೇಶ್ವರ ದೇವಾಲಯ ಮುಖ್ಯ ತಂತ್ರಿ ಬದಲಾವಣೆಗೆ ಹೈಕೋರ್ಟ್ ತಡೆ

ಬೆಂಗಳೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ತಂತ್ರಿಗಳ ಬದಲಾಯಿಸಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಕೈಗೊಂಡಿದ್ದ ನಿರ್ಧಾರಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಏಪ್ರಿಲ್ 10 ರಿಂದ ಆರಂಭಗೊಳ್ಳುವ ದೇವಾಲಯದ ವಾರ್ಷಿಕ ಜಾತ್ರೆಗೆ ಕ್ಷಣಗಣನೆ ಆರಂಭಗೊಳ್ಳುತ್ತಿದ್ದಂತೆ ತಂತ್ಕಿ ಬದಲಾವಣೆ ವಿಚಾರ ವಿವಾದವಾಗಿ ಮಾರ್ಪಟ್ಟಿದೆ.

ತಂತ್ರಿಗಳ ಬದಲಾವಣೆ ಸಂಬಂಧ ದೇವಾಲಯದ ಭಕ್ತ ಭಾಸ್ಕರ ರೈ ಕಂಟ್ರಮಜಲು ಎಂಬುವರು ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಸಮಿತಿ ನಿರ್ಧಾರಕ್ಕೆ ತಡೆ ನೀಡಿದೆ.

ಕೇರಳದ ಚುನಾವಣೆಯಲ್ಲಿ ರವೀಶ್ ಬಿಜೆಪಿ ಯಿಂದ ಸ್ಪರ್ಧಿಸಿದ್ದರು ಎಂಬ ಹಿನ್ನೆಲೆಯಲ್ಲಿ ರವೀಶ್ ತಂತ್ರಿ ಅವರನ್ನು ಬದಲಾಯಿಸಿ, ಕಾರ್ತಿಕ್ ರನ್ನು ನೂತನ ತಂತ್ರಿಗಳಾಗಿ ನೇಮಿಸಲಾಗಿತ್ತು. ಈ ನೇಮಕಕ್ಕೆ ತಡೆ ನೀಡಿರುವ ಹೈಕೋರ್ಟ್ ಮುಜರಾಯಿ ಇಲಾಖೆ ರೆವಿನ್ಯೂ ಇಲಾಖೆ ಕಾರ್ಯದರ್ಶಿದಗಳಿಗೆ ನೋಟೀಸ್ ನೀಡಿದೆ.

No Comments

Leave A Comment