Log In
BREAKING NEWS >
2020 ಮು೦ದಿನ ಪರ್ಯಾಯ ಮಹೋತ್ಸವವನ್ನು ನೆರವೇರಿಸಲಿರುವ ಶ್ರೀಅದಮಾರು ಮಠದ ಪರ್ಯಾಯಕ್ಕೆ ಶುಕ್ರವಾರದ೦ದು ಬಾಳೆ ಮಹೂರ್ತ-ಬೆಳಿಗ್ಗೆ 7.30ಕ್ಕೆ

ಸಿರಿಯಾ ಮೇಲೆ ಅಮೆರಿಕ ಕ್ಷಿಪಣಿ ದಾಳಿ ಬೆನ್ನಲ್ಲೇ ತೈಲ ದರದಲ್ಲಿ ಭಾರಿ ಏರಿಕೆ!

ಸಿಂಗಾಪುರ: ಕೆಮಿಕಲ್ ದಾಳಿಯನ್ನು ಖಂಡಿಸಿ ಸಿರಿಯಾದ ಮೇಲೆ ಅಮೆರಿಕ ನಡೆಸುತ್ತಿರುವ ಕ್ಷಿಪಣಿ ದಾಳಿ ಬೆನ್ನಲ್ಲೇ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ದರದಲ್ಲಿ ಬಾರಿ ಏರಿಕೆ ಕಂಡುಬಂದಿದೆ.

ಮೂಲಗಳ ಪ್ರಕಾರ ಅಮೆರಿಕ ಸೇನೆ ಸಿರಿಯಾದಲ್ಲಿ ಕ್ಷಿಪಣಿ ದಾಳಿ ನಡೆಸುತ್ತಿರುವ ಕುರಿತು ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಛಾ ತೈಲದರ ಪ್ರತೀ ಬ್ಯಾರೆಲ್ ಗೆ ಬರೊಬ್ಬರಿ ಶೇ.2 ರಷ್ಟು  ಅಂದರೆ 1 ಡಾಲರ್ ನಷ್ಟು ದರ ಏರಿಕೆ ಕಂಡುಬಂದಿದೆ. ಈ ಹಿಂದೆ ಪ್ರತೀ ಬ್ಯಾರೆಲ್ ಕಚ್ಛಾ ತೈಲ ದರ 54.78 ಡಾಲರ್ ನಷ್ಚಿತ್ತು. ಆದರೆ ಇದೀಗ ರಾತ್ರೋ ರಾತ್ರಿ  55.78 ಡಾಲರ್ ಗೆ ಏರಿಕೆಯಾಗಿದೆ. ಅಮೆರಿಕದ ವೆಸ್ಟ್ ಟೆಕ್ಸಾಸ್  ಇಂಟರ್ ಮೀಡಿಯೆಟ್ ಮಾರುಕಟ್ಟೆಯಲ್ಲೂ ಕಚ್ಛಾತೈಲ ದರದಲ್ಲಿ ಏರಿಕೆ ಕಂಡುಬಂದಿದ್ದು, ಪ್ರತೀ ಬ್ಯಾರೆಲ್ ಮೇಲೆ 1 ಡಾಲರ್ ಏರಿಕೆಯೊಂದಿಗೆ ಕಚ್ಛಾ ತೈಲದರ ಅಲ್ಲಿ 52.64ಕ್ಕೆ ಏರಿಕೆಯಾಗಿದೆ.

ಮಾರ್ಚ್ ತಿಂಗಳಲ್ಲೇ ಇದು ಅತ್ಯಧಿಕ ದರ ಏರಿಕೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸುತ್ತಿದ್ದು, ಸಿರಿಯಾ ಮೇಲೆ ಅಮೆರಿಕ ದಾಳಿ ನಡೆಸಿರುವುದರಿಂದ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂಬ ಶಂಕೆಯೇ ತೈಲ ದರ ಏರಿಕೆ  ಕಾರಣ ಎಂದು ಹೇಳಲಾಗುತ್ತಿದೆ.

No Comments

Leave A Comment