Log In
BREAKING NEWS >
2020 ಮು೦ದಿನ ಪರ್ಯಾಯ ಮಹೋತ್ಸವವನ್ನು ನೆರವೇರಿಸಲಿರುವ ಶ್ರೀಅದಮಾರು ಮಠದ ಪರ್ಯಾಯಕ್ಕೆ ಶುಕ್ರವಾರದ೦ದು ಬಾಳೆ ಮಹೂರ್ತ-ಬೆಳಿಗ್ಗೆ 7.30ಕ್ಕೆ

ವೋಟಿಗಾಗಿ ನೋಟು ಆರೋಪ: ಚಿತ್ರ ನಟ ಶರತ್ ಕುಮಾರ್, ಸಚಿವ ಸಿ.ವಿಜಯ ಭಾಸ್ಕರ್ ಮನೆ ಮೇಲೆ ಐಟಿ ದಾಳಿ

ಚೆನ್ನೈ: ಮತದಾರರಿಗೆ ಹಣ ಹಂಚಿಕೆ ಮಾಡಿದ ಆರೋಪದ ಮೇಲೆ ಇಂದು ಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಚಿತ್ರನಟ ಶರತ್ ಕುಮಾರ್ ಮತ್ತು ತಮಿಳು ನಾಡು ಸರ್ಕಾರದ ಆರೋಗ್ಯ ಸಚಿವ ಸಿ. ವಿಜಯಭಾಸ್ಕರ್ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.

ಜೆ.ಜಯಲಲಿತಾ ನಿಧನದ ನಂತರ ಚೆನ್ನೈನ ಆರ್ ಕೆ ನಗರ ವಿಧಾನಸಭಾ ಕ್ಷೇತ್ರದಲ್ಲಿ ಇದೇ 12ರಂದು ಚುನಾವಣೆ ನಡೆಯಲಿದ್ದು ಈ ಸಂಬಂಧ ಮತದಾರರಿಗೆ ಹಣ ಹಂಚಿದ ಆರೋಪ ಕೇಳಿಬರುತ್ತಿದೆ.

ಚೆನ್ನೈಯಲ್ಲಿರುವ ನಟ ಶರತ್ ಕುಮಾರ್ ಮತ್ತು ವಿಜಯ ಭಾಸ್ಕರ್ ಅವರ ಮನೆಗೆ ಆಗಮಿಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು  ತಪಾಸಣೆ ನಡೆಸಿದರು. ಸಚಿವ ವಿಜಯ ಭಾಸ್ಕರ್ ಮತ್ತು ಅವರ ಸಹಚರರು ಹೊಂದಿರುವ ಆಸ್ತಿ ಸೇರಿದಂತೆ 34 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ.

ಆರ್ ಕೆ ನಗರ ಕ್ಷೇತ್ರದಲ್ಲಿ ವ್ಯಕ್ತಿಯೊಬ್ಬರಿಗೆ ಹಣ ಹಂಚಿಕೆ ಮಾಡಿ ವಿಕೆ ಶಶಿಕಲಾ ಬಣಕ್ಕೆ ಮತ ಹಾಕಬೇಕೆಂದು ಕೇಳುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾದ ನಂತರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಈ ದಾಳಿ ನಡೆದಿದೆ.

ವಿಜಯ ಭಾಸ್ಕರ್ ಅವರು ಶಶಿಕಲಾ ಬಣಕ್ಕೆ ಸೇರಿದ್ದು, ನಟ ಶರತ್ ಕುಮಾರ್ ಅವರ ಎಐಎಸ್ಎಂಕೆ ಇತ್ತೀಚೆಗೆ ಶಶಿಕಲಾ ಅವರ ಬಣದ ಅಭ್ಯರ್ಥಿ ಟಿಟಿವಿ ದಿನಕರನ್ ಗೆ ಬೆಂಬಲ ನೀಡಿದ್ದರು.

No Comments

Leave A Comment