Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ರೋಬೋಟ್ ನ್ನು ವಿವಾಹವಾದ ಚೀನಾ ಇಂಜಿನಿಯರ್!

ಬೀಜಿಂಗ್: ವಿವಾಹವಾಗಲು ಹೆಣ್ಣು ಸಿಗದೇ ಇದ್ದ ಹಿನ್ನೆಲೆಯಲ್ಲಿ ಹತಾಶೆಗೊಳಗಾದ ಚೀನಾದ 31 ವರ್ಷದ ಇಂಜಿನಿಯರ್ ತಾನೇ ಸೃಷ್ಟಿಸಿದ ರೋಬೋಟ್ ನ್ನು ವಿವಾಹವಾಗಿದ್ದಾರೆ.

ಕೃತಕ ಬುದ್ಧಿಮತ್ತೆ ತಜ್ಞ ಝೆಂಗ್ ಜಿಯಾಜಿಯಾ ರೋಬೋಟ್ ನ್ನು ವಿವಾಹವಾಗಿರುವ ಇಂಜಿನಿಯರ್ ಆಗಿದ್ದು, ಝೆಜಿಯಾಂಗ್ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದಾರೆ. ವಿವಾಹವಾಗಲು ಹೆಣ್ಣು ಸಿಗದೇ ಬೇಸತ್ತು ತಾವೇ ಸೃಷ್ಟಿಸಿದ್ದ ಕೃತಕ ಬುದ್ಧಿಮತ್ತೆಯ ಯಿಂಗ್ ಯಿಂಗ್ ಎಂಬ ರೋಬೋಟ್ ನ್ನು ಸರಳ ಸಮಾರಂಭವೊಂದರಲ್ಲಿ ವಿವಾಹವಾಗಿದ್ದಾರೆ.

ಕೃತಕ ಬುದ್ಧಿಮತ್ತೆ ಚಾಲಿತ ಯಿಂಗ್-ಯಿಂಗ್, ಚೀನಾದ ಅಕ್ಷರಗಳು ಹಾಗೂ ಚಿತ್ರಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿದ್ದು, ಸರಳವಾಗಿ ಮಾತನಾಡುವ ಸಾಮರ್ಥ್ಯವನ್ನೂ ಹೊಂದಿದೆಯಂತೆ. ವಿವಾಹ ಕಾರ್ಯಕ್ರಮದಲ್ಲಿ ರೋಬೋಟ್ ನ್ನು ಚೀನಾದ ಸಾಂಪ್ರದಾಯಿಕ ವಧುವಿನಂತೆಯೇ ಸಿಂಗರಿಸಲಾಗಿತ್ತು. ಈಗ ರೋಬೋಟ್ ನ್ನು ಪತ್ನಿಯನ್ನಾಗಿ ಅಪ್ ಗ್ರೇಡ್ ಮಾಡಲು ಝೆಂಗ್ ಯೋಜನೆ ರೂಪಿಸಿದ್ದು, ನಡೆಯುವ ಹಾಗೂ ಮನೆಯಲ್ಲಿ ಮನುಷ್ಯರಂತೆಯೇ ಇರುವಂತೆ ರೋಬೋಟ್ ನ್ನು ಬದಲಾವಣೆ ಮಾಡಲಿದ್ದಾರಂತೆ.

ಚೀನಾದಲ್ಲಿ 2030 ರ ವೇಳೆಗೆ ಸುಮಾರು 30 ಮಿಲಿಯನ್ ಚೀನಾದ ಪುರುಷರು ವಿವಾಹವಾಗದೇ ಏಕಾಂಗಿಯಾಗಿ ಉಳಿಯಲಿದ್ದಾರೆ ಎಂದು ಇತ್ತೀಚೆಗಷ್ಟೇ ಸಂಶೋಧಕರು ಎಚ್ಚರಿಸಿದ್ದರು. 2020 ರ ವೇಳೆಗೆ ಚೀನಾದಲ್ಲಿ ವಿವಾಹವಾಗದೇ ಉಳಿಯುವ 35-59 ವರ್ಷ ವಯಸ್ಸಿನ ಪುರುಷರ ಸಂಖ್ಯೆ 15 ಮಿಲಿಯನ್ ದಾಟಲಿದ್ದು 2050 ರ ವೇಳೆಗೆ 30 ಮಿಲಿಯನ್ ನಷ್ಟಾಗಲಿದೆ ಎಂದು ಚೀನಾದ ಸೋಶಿಯಲ್ ಸೈನ್ಸ್ ನ ಅಕಾಡೆಮಿಯ ಸಂಶೋಧಕರೊಬ್ಬರು ಹೇಳಿದ್ದರು.

No Comments

Leave A Comment