Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಗೋಸಾಗಾಟ : ರಾಜಸ್ಥಾನದಲ್ಲಿ ವ್ಯಕ್ತಿಯನ್ನು ಚಚ್ಚಿ ಕೊಂದ ಗೋರಕ್ಷಕರು

ಹೊಸದಿಲ್ಲಿ : ರಾಜಸ್ಥಾನದ ಆಲ್ವಾರ್‌ ಜಿಲ್ಲೆಯಲ್ಲಿ ಗೋಸಾಗಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಗೋರಕ್ಷರೆನಿಸಿಕೊಂಡವರ ಸಮೂಹವೊಂದು ಹೊಡೆದು ಸಾಯಿಸಿದೆ.

ಹರಿಯಾಣ ಮೂಲದ ಈ ಹತ ವ್ಯಕ್ತಿಯು ರಾಜಸ್ಥಾನದ ಆದ್ಯಂತ ಟ್ರಕ್ಕುಗಳಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದಾನೆ ಎಂಬ ಶಂಕೆಯಲ್ಲಿ ಗೋರಕ್ಷಕರ ತಂಡ ಆತನನ್ನು ಹೊಡೆದು ಸಾಯಿಸಿರುವ ಈ ಘಟನೆ ಎಪ್ರಿಲ್‌ 1ರಂದು ರಾಜಸ್ಥಾನದ ಆಲ್ವಾರ್‌ ಜಿಲ್ಲೆಯ ಎಂಟನೇ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿತ್ತು.

ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯು ಮೊನ್ನೆ ಸೋಮವಾರ ಕೊನೆಯುಸಿರೆಳೆದ. ಆದರೆ ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈ ತನಕ ಯಾರನ್ನೂ ಬಂಧಿಸಿಲ್ಲ.

“ನಾವು ಈ ಘಟನೆ ಸಂಬಂಧ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಆರು ಮಂದಿಯ ವಿರುದ್ಧ ಕೊಲೆ ಕೇಸನ್ನು ಹಾಕಿದ್ದೇವೆ ಮತ್ತು ಸುಮಾರು 200 ಅಪರಿಚಿತರ ವಿರುದ್ಧವೂ ಮಾರಣಾಂತಿಕ ಹಲ್ಲೆ ಕೇಸನ್ನು ದಾಖಲಿಸಿಕೊಂಡಿದ್ದೇವೆ’ ಎಂದು ಬಹರೋರ್‌ ಠಾಣಾಧಿಕಾರಿ ರಮೇಶ್‌ ಸಿನ್‌ಸಿನ್‌ವಾರ್‌ ಅವರನ್ನು ಉಲ್ಲೇಖೀಸಿ ಹಿಂದುಸ್ಥಾನ್‌ ಟೈಮ್ಸ್‌ ವರದಿ ಮಾಡಿದೆ.

 

No Comments

Leave A Comment