Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಮುಂಬೈ: ತಾಜ್ ಹೊಟೇಲ್ ನ ಮಹಡಿಯಿಂದ ಹಾರಿ ಪ್ರಾಣಬಿಟ್ಟ ಬೆಂಗಳೂರಿನ ವಿದ್ಯಾರ್ಥಿ

ಮುಂಬೈ:  ಬೆಂಗಳೂರು ಮೂಲದ 24 ವರ್ಷದ ಕಾಲೇಜು ವಿದ್ಯಾರ್ಥಿ ಇಲ್ಲಿನ ಬಾಂದ್ರಾ ಉಪನಗರದ ತಾಜ್ ಹೊಟೇಲ್ ವೊಂದರ 19ನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಬೆಂಗಳೂರಿನ ಅರ್ಜುನ್ ಭಾರದ್ವಾಜ್ ಮುಂಬೈ ಉಪನಗರದ ವಿಲೆ ಪಾರ್ಲೆಯಲ್ಲಿ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ನಿನ್ನೆ ಬೆಳಗಿನ ಜಾವ ಅರ್ಜುನ್ ಭಾರದ್ವಾಜ್ ತಾಜ್ ಹೊಟೇಲ್ ಗೆ ಆಗಮಿಸಿ ರೂಮ್ ವೊಂದನ್ನು ಕಾಯ್ದಿರಿಸಿದರು. ನಿನ್ನೆ ಸಂಜೆ 6.30ರ ಸುಮಾರಿನಲ್ಲಿ ರೂಮಿನ ಕಿಟಕಿ ಗ್ಲಾಸನ್ನು ಒಡೆದು ಕೆಳಗೆ ಹಾರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರು ಹೇಳುವ ಪ್ರಕಾರ, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ ಭಾರದ್ವಾಜ್ , ಅದರಲ್ಲಿ ತನ್ನನ್ನೇ ತಾನು ಸಾಯಿಸಿಕೊಳ್ಳುವ ಕ್ರಮಗಳನ್ನು ಹೇಳಿಕೊಂಡಿದ್ದಾರೆ.

ನಾನೊಬ್ಬ ಮಾದಕ ವ್ಯಸನಿ. ನನಗೆ ಬದುಕಲು ಇಚ್ಛೆಯಿಲ್ಲ, ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟಲ್ಲಿ ಬರೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ಬರೆದಿಟ್ಟ ಪತ್ರ ಪೊಲೀಸರಿಗೆ ಸಿಕ್ಕಿದೆ.

ಹೊಟೇಲ್ ನ ಆವರಣದಲ್ಲಿ ಭಾರೀ ಶಬ್ದ ಕೇಳಿಸಿತು. ಕೂಡಲೇ ಧಾವಿಸಿ ನೋಡಿದಾಗ ಭಾರದ್ವಾಜ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು ಎಂದು ಹೊಟೇಲ್ ನ ಭದ್ರತಾ ಸಿಬ್ಬಂದಿ ಹೇಳುತ್ತಾರೆ.

ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮೃತಪಟ್ಟರು. ಹೊಟೇಲ್ ನಲ್ಲಿ ರೂಂ ಬುಕ್ ಮಾಡುವಾಗ ದಾಖಲೆಗಳನ್ನು ನೀಡಿದ್ದರಿಂದ ಅಧಿಕಾರಿಗಳಿಗೆ ಗುರುತು ಪತ್ತೆ ಮಾಡುವಲ್ಲಿ ಸಹಾಯವಾಯಿತು. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

No Comments

Leave A Comment