Log In
BREAKING NEWS >
ಏಪ್ರಿಲ್ 22ರ೦ದು ಉಡುಪಿಯ ಕಲ್ಸ೦ಕದ ರಾಯಲ್ ಗಾರ್ಡನ್ ನಲ್ಲಿ ಬೃಹತ್ ಕಾ೦ಗ್ರೆಸ್ ಕಾರ್ಯಕರ್ತರ ಸಮಾವೇಶ-23ರ೦ದು ಪ್ರಮೋದ್ ಮಧ್ವರಾಜ್ ನಾಮಪತ್ರಸಲ್ಲಿಕೆ...

ಮಾಜಿ ಕಾಂಗ್ರೆಸ್ ಶಾಸಕ ಅಂಬರೀಶ್ ಗೌತಮ್ ಬಿಜೆಪಿಗೆ ಸೇರ್ಪಡೆ

ನವದೆಹಲಿ: ಕಾಂಗ್ರೆಸ್ ಪಕ್ಷ ಹಿರಿಯ ನಾಯಕರನ್ನು ಕಡೆಗಣಿಸದೆ ಎಂದು ದೂರಿ ತಮ್ಮ ಪುತ್ರ ಅವಿನಾಶ್ ಗೌತಮ್ ಜೊತೆಗೆ ಮಾಜಿ ಕಾಂಗ್ರೆಸ್ ಶಾಸಕ ಅಂಬರೀಶ್ ಗೌತಮ್ ಸೋಮವಾರ ಭಾರತೀಯ ಜನತಾ ಪಕ್ಷ ಸೇರಿದ್ದಾರೆ.

ತಮ್ಮ ಸಲಹೆ ತೆಗೆದುಕೊಳ್ಳದೆ ಈ ಬಾರಿಯ ದೆಹಲಿ ಮುನ್ಸಿಪಲ್ ಚುನಾವಣೆಗೆ ಟಿಕೆಟ್ ನೀಡಿರುವುದಕ್ಕೆ ಅಸಮಾಧಾನ ಕೂಡ ವ್ಯಕ್ತಪಡಿಸಿದ್ದಾರೆ ಪೂರ್ವ ದೆಹಲಿಯ ಕೊಂಡ್ಲಿ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿದ್ದ ಗೌತಮ್.

“ನನ್ನ ಕ್ಷೇತ್ರ ಮತ್ತು ಕಾರ್ಯಕರ್ತರನ್ನು ಕಡೆಗಣಿಸಿರುವುದರಿಂದ ಮತ್ತು ನನ್ನ ಸಲಹೆ ತೆಗೆದುಕೊಳ್ಳದೆ ಟಿಕೆಟ್ ಗಳನ್ನು ನೀಡಿರುವುದರಿಂದ ನಾನು ಕಾಂಗ್ರೆಸ್ ತೊರೆದಿದ್ದೇನೆ. ನನ್ನನ್ನು ಉಪೇಕ್ಷಿಸಲಾಗಿದೆ” ಎಂದು ಗೌತಮ್ ಬಿಜೆಪಿ ಸೇರಿದ ಮೇಲೆ ವರದಿಗಾರರಿಗೆ ತಿಳಿಸಿದ್ದಾರೆ.

ಈ ಸಮಯದಲ್ಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ವಿನಯ್ ಸಹಸ್ರಬುದ್ಧೆ ಕೂಡ ಉಪಸ್ಥಿತರಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೂಡ ಪ್ರಶಂಸಿಸಿರುವ ಗೌತಮ್, “ಪ್ರಧಾನಿಯವರು ನೀತಿಗಳು ಮತ್ತು ಕಾರ್ಯವೈಖರಿ ನನಗೆ ಮೆಚ್ಚುಗೆಯಾಗಿದೆ” ಎಂದಿದ್ದಾರೆ.

No Comments

Leave A Comment