Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಇಸಿಸ್ ಕಪಿಮುಷ್ಠಿಯಲ್ಲಿದ್ದ 33 ಭಾರತೀಯರು ತವರಿಗೆ ವಾಪಸ್

ನವದೆಹಲಿ: ಇರಾಕ್ ನಲ್ಲಿ ಸಿಲುಕಿಕೊಂಡು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಇರಾನ್ (ಇಸಿಸ್) ಉಗ್ರರ ಕಪಿಮುಷ್ಠಿಯಲ್ಲಿದ್ದ 33 ಭಾರತೀಯರನ್ನು ರಕ್ಷಣೆ ಮಾಡಲಾಗಿದ್ದು, ಸೋಮವಾರ ಎಲ್ಲರೂ ಸುರಕ್ಷಿತವಾಗಿ ತವರಿಗೆ ಮರಳಿದ್ದಾರೆ.

ಉದ್ಯೋಗ ಕೊಡಿಸುವುದಾಗಿ ಹೇಳಿ ಕೆಲ ಏಜೆಂಟರ್ ಗಳು ಭಾರತೀಯರನ್ನು ಇರಾಕ್’ಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಏಜೆಂಟರ್ ಗಳು ನಂತರ ಭಾರತೀಯರನ್ನು ನಡು ನೀರಲ್ಲಿ ಕೈಬಿಟ್ಟು ಹೋಗಿದ್ದಾರೆ. ನಂತರ ಭಾರತೀಯರು ಉಗ್ರರು ವಶಕ್ಕೆ ಸಿಲುಕಿ ಹಾಕಿಕೊಂಡಿದ್ದಾರೆ.

ಭಾರತೀಯರು ಉಗ್ರರ ವಶದಲ್ಲಿರುವ ಕುರಿತಂತೆ ಮಾಹಿತಿ ತಿಳಿಯುತ್ತಿದ್ದಂತೆ ಭಾರತೀಯರನ್ನು ಬಿಡುಗಡೆ ಮಾಡಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಸಾಕಷ್ಟು ಶ್ರಮವನ್ನು ಪಟ್ಟಿತ್ತು. ಈ ಪ್ರಯತ್ನದ ಫಲದಿಂದಾಗಿ ಭಾರತೀಯರು ರಕ್ಷಣೆಯಾಗಿದ್ದಾರೆ. ಇದರಂತೆ ಇಂದು ಬೆಳಿಗ್ಗೆ ದೆಹಲಿ ವಿಮಾನ ನಿಲ್ದಾಣಕ್ಕೆ ರಕ್ಷಣೆಗೊಂಡ 33 ಭಾರತೀಯರು ಬಂದಿಳಿದಿದ್ದಾರೆ.

ಇನ್ನೂ ಕೆಲ ಭಾರತೀಯರೂ ಕೂಡ ಉದ್ಯೋಗದ ಹೆಸರಿನಲ್ಲಿ ಮೋಸ ಹೋಗಿದ್ದಾರೆ. ಅವರೆಲ್ಲರೂ ಈಗಲೂ ಇರಾಕ್ ನಲ್ಲಿ ಇಸಿಸ್ ಉಗ್ರರ ವಶದಲ್ಲಿದ್ದಾರೆಂದು ರಕ್ಷಣೆಗೊಂಡ ಭಾರತೀಯರು ಹೇಳಿದ್ದಾರೆ.

ಕೆಲ ತಿಂಗಳ ಹಿಂದಷ್ಟೇ ಭಾರತೀಯ ಮೂಲದ ಕ್ರೈಸ್ತ ಧರ್ಮಗುರು ಫಾದರ್ ಟಾಮ್ ಅವರನ್ನು ಇಸಿಸ್ ಉಗ್ರರು ಯೆಮೆನ್ ನಲ್ಲಿ ಅಪಹರಣ ಮಾಡಿದ್ದರು. ಈಗಲೂ ಫಾದರ್ ಟಾಮ್ ಅವರನ್ನು ಮರಳಿ ಭಾರತಕ್ಕೆ ಕರೆತರಲು ಸರ್ಕಾರ ಸಾಕಷ್ಟು ಶ್ರಮಪಡುತ್ತಿದೆ.

15 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದ ಇರಾನ್….

ಆಗಸ್ಟ್ 2016 ಮತ್ತು 2017ರ ಜನವರಿ ಅಂತರದಲ್ಲಿ ಬಂಧನಕ್ಕೊಳಗಾಗಿದ್ದ 15 ಭಾರತೀಯ ಮೀನುಗಾರರನ್ನು ಇರಾನ್ ಸರ್ಕಾರ ಸೋಮವಾರ ಬಿಡುಗಡೆ ಮಾಡಿದೆ.

ಈ ಕುರಿತಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಟ್ವೀಟ್ ಮಾಡಿದ್ದು, ಬಂಧನಕ್ಕೊಳಗಾಗಿದ್ದ ತಮಿಳುನಾಡು ಮೂಲದ 15 ಭಾರತೀಯರನ್ನು ಇರಾನ್ ಬಿಡುಗಡೆ ಮಾಡಿದೆ ಎಂದು ಹೇಳಿದ್ದಾರೆ.

ಬಹರೈನ್ ನಾಗಿ ಕೆಲಸ ಮಾಡುತ್ತಿದ್ದ ಈ ಮೀನುಗಾರರು ಸೆಪ್ಟೆಂಬರ್ 22 ರಂದು ಅನುಮತಿ ಪಡೆಯದೆಯೇ ಇರಾನ್ ಸಮುದ್ರ ಭಾಗಕ್ಕೆ ಪ್ರವೇಶಿಸಿದ್ದರಿಂದ ಇರಾನ್ ಮೀನುಗಾರರನ್ನು ವಶಪಡಿಸಿಕೊಂಡಿತ್ತು.

No Comments

Leave A Comment