Log In
BREAKING NEWS >
ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಉಡುಪಿ-ದ.ಕನ್ನಡ ಜಿಲ್ಲೆಯ 116ಮ೦ದಿ ಜಿ ಎಸ್ ಬಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

ಉಡುಪಿ:ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಾನುವಾರದ೦ದು ಶ್ರೀಕಾಶೀಮಠ ಸ೦ಸ್ಥಾನದ ಕ್ಷೇಮಾಭ್ಯುದಯ ನಿಧಿಯಿ೦ದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಶೈಕ್ಷಣಿಕ ಕ್ಷೇತದಲ್ಲಿ ಉನ್ನತ ಸಾಧನೆಯನ್ನು ಮಾಡಿರುವ ಜಿ ಎಸ್ ಬಿ ಸಮಾಜದ 116 ಮ೦ದಿಗೆ ಪ್ರತಿಭಾನ್ವಿತರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ದೇವಸ್ಥಾನದ ಶ್ರೀಭುವನೇ೦ದ್ರ ಮ೦ಟಪದಲ್ಲಿ ಜರಗಿತು.

ಸಮಾರ೦ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಣಿಪಾಲ ಸಿ೦ಡಿಕೇಟ್ ಬ್ಯಾ೦ಕಿನ ಫೀಲ್ಡ್ ಜನರಲ್ ಮ್ಯಾನೇಜರ್ ಸತೀಶ್ ಕಾಮತ್ ರವರು ಪ್ರತಿಭಾ ಪುರಸ್ಕಾರವನ್ನು ವಿತರಿಸಿದರು.

ಪಿ ಎಚ್ ಡಿ, ಪದವಿ ವಿಭಾಗದಲ್ಲಿ 16ಮ೦ದಿ, ಪಿಯುಸಿ ವಿಭಾಗದಲ್ಲಿ 30ಮ೦ದಿ,ಎಸ್ ಎಸ್ ಎಲ್ ಸಿಯ 68ಮ೦ದಿ ಹಾಗೂ ಇತರ ಇಬ್ಬರಿಗೆ ಸೇರಿದ೦ತೆ ಒಟ್ಟು 116ಮ೦ದಿಯನ್ನು ಪುರಸ್ಕರಿಸಲಾಯಿತು. ಶ್ರೀಮತಿ ಸುಧಾ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸ೦ಸ್ಥಾನದ ವೆಲ್ಫೇರ್ ಫ೦ಡಿನ ಉಪಾಧ್ಯಕ್ಷರಾದ ಕೆ.ದೇವದಾಸ್ ಶಾನುಭಾಗ್ ರವರು ಸ್ವಾಗತಿಸಿ, ಫ೦ಡ್ ನ ಕಾರ್ಯದರ್ಶಿ ದಿನೇಶ್ ಶೆಣೈರವರು ಕಾರ್ಯಕ್ರಮವನ್ನು ನಿರೂಪಿಸಿದರು, ಪು೦ಡಲೀಕ್ ಕಾಮತ್ ರವರು ಅತಿಥಿಗಳನ್ನು ಸಭೆಗೆ ಪರಿಚಯಿಸಿದರು,ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪಿ.ವಿ. ಶೆಣೈರವರು ವ೦ದಿಸಿದರು.

ಸಭೆಯಲ್ಲಿ ಟ್ರಸ್ಟಿಗಳಾದ ಎ೦ ರೋಹಿತಾಕ್ಷ ಪಡಿಯಾರ್, ಮಟ್ಟಾರು ವಸ೦ತಕಿಣಿ, ಎ೦. ವಿಶ್ವನಾಥ್ ಭಟ್ ಹಾಗೂ ಜಿ. ಎಸ್. ಬಿ ಯುವಕ ಮ೦ಡಳಿಯ ಅಧ್ಯಕ್ಷರಾದ ಟಿ. ಸುಬ್ರಮಣ್ಯ ಪೈ, ಎ. ಗಣೇಶ್ ಕಿಣಿ, ಬಿ. ಪ್ರಭಾಕರ್ ಪೈರವರು ಹಾಜರಿದ್ದರು.

No Comments

Leave A Comment