Log In
BREAKING NEWS >
ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಉಡುಪಿ:ಬೀಗ ಬಲತ್ಕಾರವಾಗಿಮುರಿದು ನಗದು ಮತ್ತು ಚಿನ್ನದ ಮೌಲ್ಯ 2,65,000/- ರೂ ಕಳ್ಳತನ

ಉಡುಪಿ: ಪಿರ್ಯಾದಿದಾರರಾದ ಸತೀಶ್ ದೇವಾಡಿಗ (52), ತಂದೆ: ಚಂದಪ್ಪ ದೇವಾಡಿಗ, ವಾಸ: ನಂ 1-133 ಸಿ ಕಸ್ತೂರ್ಬಾ ನಗರ 7 ನೇ ಮೇನ್ ಚಿಟ್ಪಾಡಿ 76 ಬಡಗುಬೆಟ್ಟು ಉಡುಪಿ ಇವರು ದಿನಾಂಕ 01/04/2017 ರಂದು ಬೆಳಿಗ್ಗೆ 04:00 ಗಂಟೆಗೆ ಅವರ ಹೆಂಡತಿ ಮಕ್ಕಳೊಂದಿಗೆ ಅವರ ವಾಸದ ಮನೆಯಾದ ಸಜ್ಯೋತಿ ಮನೆ ನಂಬ್ರ 1-133 ಸಿ 7 ನೇ ಮುಖ್ಯ ರಸ್ತೆ ಕಸ್ತೂರ್ಬ ನಗರ ಚಿಟ್ಪಾಡಿಯಿಂದ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅವರ ಸ್ವಂತ ಕಾರಿನಲ್ಲಿ ಚಾಲಕ ಯೋಗಿಶ್‌ಎಂಬುವವರೊಂದಿಗೆ ಹೊರಟಿದ್ದು ಬೆಳಿಗ್ಗೆ 11:00 ಗಂಟೆಯ ಸಮಯಕ್ಕೆ ಅವರ ಅಣ್ಣ ಆನಂದ ದೇವಾಡಿಗರವರ ಮನೆಯ ಎದುರಿನ ಬಾಗಿಲನ್ನು ಮುರಿದು ಕಳ್ಳತನವಾಗಿರುವ ಬಗ್ಗೆ ನೆರ ಮನೆಯವರು ಬೆಳಿಗ್ಗೆ 9:30 ಗಂಟೆಗೆ ನೋಡಿ ಮಾಹಿತಿ ನೀಡಿದಂತೆ ವಾಪಾಸು ಮನೆಗೆ ಬಂದು ನೋಡಿದಾಗ ಯಾರೋ ಕಳ್ಳರು ಮನೆ ಎದುರಿನ ಬಾಗಿಲಿನ ಬೀಗವನ್ನು ಬಲತ್ಕಾರವಾಗಿ ಯಾವುದೋ ಆಯುಧದಿಂದ ಮುರಿದು ಒಳ ಪ್ರವೇಶಿಸಿ ಮನೆಯ ಒಳಗೆ ಬೆಡ್‌ರೂಮಿನ ವಾಲ್‌ಡ್ರೂಪ್‌ ಡ್ರವರ್‌ನಲ್ಲಿಟ್ಟಿದ್ದ ಅವರ ಹೆಂಡತಿ ಚಿನ್ನಾಭರಣ ಪರ್ಸ್‌ ಕಳವು ಮಾಡಿದ್ದು ಅದರಲ್ಲಿದ್ದ 1) 4 ಜೊತೆಗೆ ಕಿವಿಯ ಬೆಂಡೋಲೆಗಳು ಅವುಗಳಲ್ಲಿ ಚಿನ್ನದ ಕರಿಮಣಿ ಇರುವ ಬೆಂಡೋಲೆ -1 ಜೊತೆ , ಚಿನ್ನದ ಮುತ್ತುಗಳು ಇರುವ ಬೆಂಡೋಲೆ-1 ಜೊತೆಗೆ , ಚಿನ್ನದ ಹವಳ ಇರುವ ಬೆಂಡೋಲೆ-1 ಜೊತೆ , ಚಿನ್ನದ ಮ್ಯಾಚಿಂಗ್‌ಸ್ಟೋನ್‌ ಬದಲಾಯಿಸುವ ಬೆಂಡೋಲೆ-1 ಜೊತೆ ಅವುಗಳ ಒಟ್ಟು ತೂಕ =24 ಗ್ರಾಂ , 2) ಚಿನ್ನದ ಅಂದಾಜು 32 ಗ್ರಾಂ ತೂಕದ ಕರಿಮಣಿ ಸರ ಅದರಲ್ಲಿ ತಾಳಿ ಇರುವುದಿಲ್ಲ, 3) ಚಿನ್ನದ ಅಂದಾಜು 32 ಗ್ರಾಂ ತೂಕದ ಲಕ್ಷ್ಮೀ ಸರ -1 ,4) ಚಿನ್ನದ 20 ಗ್ರಾಂ ತೂಕದ ಬಳೆಗಳು=2 , ಇದ್ದಿರುತ್ತದೆ ಹಾಗೂ ವಾಲ್‌ಡ್ರೂಪ್‌ನ ಒಳಗಿದ್ದ ಚಿನ್ನದ 10 ಗ್ರಾಂ ತೂಕದ ನವರತ್ನ ಉಂಗುರ ಹಾಗೂ ನಗದು ಹಣ 5,000/- ರೂಪಾಯಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಲ್ಲದೇ ಮನೆಯ ಮಾಳಿಗೆಯ ಮೇಲಿನ ಗೋದ್ರೇಜ್‌ನಲ್ಲಿದ್ದ ಬಟ್ಟೆಗಳನ್ನು ಎಳೆದು ಹೋಗಿರುತ್ತಾರೆ.

ಕಳವಾಗಿರುವ ನಗದು ಮತ್ತು ಚಿನ್ನದ ಮೌಲ್ಯ 2,65,000/- ರೂಪಾಯಿ ಕಳ್ಳತನವಾಗಿರುತ್ತದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 41/2017 ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No Comments

Leave A Comment