Log In
BREAKING NEWS >
ಏಪ್ರಿಲ್ 22ರ೦ದು ಉಡುಪಿಯ ಕಲ್ಸ೦ಕದ ರಾಯಲ್ ಗಾರ್ಡನ್ ನಲ್ಲಿ ಬೃಹತ್ ಕಾ೦ಗ್ರೆಸ್ ಕಾರ್ಯಕರ್ತರ ಸಮಾವೇಶ-23ರ೦ದು ಪ್ರಮೋದ್ ಮಧ್ವರಾಜ್ ನಾಮಪತ್ರಸಲ್ಲಿಕೆ...

38 ಆಡು ಸಾವು- ಹುಬ್ಬಳ್ಳಿಯಲ್ಲಿ ಬಿರುಗಾಳಿ ಸಹಿತ ಮಳೆ

ಹುಬ್ಬಳ್ಳಿ: ಹುಬ್ಬಳ್ಳಿ, ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಶನಿವಾರ ಮಧ್ಯಾಹ್ನ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ.

ಹುಬ್ಬಳ್ಳಿಯಲ್ಲಿ ಗುಡುಗು–ಸಿಡಿಲು ಸಹಿತ ಅರ್ಧ ಗಂಟೆ ಮಳೆಯಾಗಿದೆ. ಹಳೆಹುಬ್ಬಳ್ಳಿಯ ನಾರಾಯಣ ಸೋಫಾದಲ್ಲಿ ಅರಳಿ ಮರವೊಂದು ಬುಡ ಸಮೇತ ವಾಲಿ, ಪಕ್ಕದಲ್ಲಿದ್ದ ಸದಾನಂದ ದವಳೆ ಎಂಬುವವರ ಮನೆಯ ಮೇಲೆ ಒರಗಿದೆ.

ಇದರಿಂದಾಗಿ ಮನೆಯಲ್ಲಿದ್ದ ಗರ್ಭಿಣಿ ಸಹಿತ ಎಂಟು ಜನರು ತೀವ್ರವಾಗಿ ಗಾಯಗೊಂಡಿದ್ದು, ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

38 ಆಡು ಸಾವು: ಬೆಳಗಾವಿ ಜಿಲ್ಲೆ ಬೈಲಹೊಂಗಲದಲ್ಲಿ  ಆಲಿಕಲ್ಲು ಸಹಿತ ಬಿರುಸಿನ ಮಳೆಯಾಗಿದ್ದು,  ನೇಸರಗಿ ಭಾಗದ ಕೊಳ್ಳಾನಟ್ಟಿಯಲ್ಲಿ ಸಿಡಿಲು ಬಡಿದು 38 ಆಡುಗಳು ಮೃತಪಟ್ಟಿವೆ. ತಾಲ್ಲೂಕಿನ ನಾಗನೂರ ಗ್ರಾಮದ ಶಿವಾಜಿ ಪರಸಪ್ಪ ಕಮ್ಮಾರ ಎಂಬುವವರ ಮನೆಯ ಮೇಲೆ ಮರ ಬಿದ್ದ ಪರಿಣಾಮ ಗೋಡೆ ಕುಸಿದಿದೆ.

No Comments

Leave A Comment