Log In
BREAKING NEWS >
ಏಪ್ರಿಲ್ 22ರ೦ದು ಉಡುಪಿಯ ಕಲ್ಸ೦ಕದ ರಾಯಲ್ ಗಾರ್ಡನ್ ನಲ್ಲಿ ಬೃಹತ್ ಕಾ೦ಗ್ರೆಸ್ ಕಾರ್ಯಕರ್ತರ ಸಮಾವೇಶ-23ರ೦ದು ಪ್ರಮೋದ್ ಮಧ್ವರಾಜ್ ನಾಮಪತ್ರಸಲ್ಲಿಕೆ...

ಇಸಿಸ್ ವಿರುದ್ಧ ಮುಂದುವರೆದ ಇರಾಕ್ ವಾಯುದಾಳಿ; 100ಕ್ಕೂ ಹೆಚ್ಚು ಉಗ್ರರು ಹತ!

ಬಾಗ್ದಾದ್: ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳ ಕಪಿಮುಷ್ಟಿಯಲ್ಲಿರುವ ಮೊಸುಲ್ ನಗರದ ಹೊರವಲಯದಲ್ಲಿ ಇರಾಕ್ ಸೇನೆಯ ಫೈಟರ್ ಜೆಟ್ ಗಳು ದಾಳಿ ಮಾಡಿದ್ದು, ದಾಳಿಯಲ್ಲಿ ಕನಿಷ್ಠ 100 ಮಂದಿ ಉಗ್ರರು ಹತರಾಗಿದ್ದಾರೆ ಎಂದು ತಿಳಿದುಬಂದಿದೆ.

ಖಾಸಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿರುವಂತೆ ಮೊಸುಲ್ ನಗರದ ಹೊರವಲಯದಲ್ಲಿರುವ ಇಸ್ಲಾಮಿಕ್ ಸ್ಟೇಟ್ ಉಗ್ರರ ಅಡಗುದಾಣಗಳ ಮೇಲೆ ಇರಾಕ್ ಫೈಟರ್ ಜೆಟ್ ಗಳು ಸತತ ಬಾಂಬ್ ದಾಳಿ ನಡೆಸಿವೆ. ಪರಿಣಾಮ  ಅಡಗುದಾಣಗಳಲ್ಲಿದ್ದ ಸುಮಾರು 100ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದಾರೆ.

ಸಿರಿಯಾ ಗಡಿ ಮತ್ತು ಮೊಸುಲ್ ನಗರವನ್ನು ಹೊಂದಿಕೊಂಡಂತೆ ಇರುವ ಬಾಜ್ ಪ್ರದೇಶದಲ್ಲಿ ಇರಾಕಿ ಪಡೆಗಳು ದಾಳಿ ನಡೆಸುತ್ತಿದ್ದು, ಇಲ್ಲಿ ಸುಮಾರು  150 ರಿಂದ 200ಕ್ಕೂ ಹೆಚ್ಚು ಉಗ್ರರು ಅಡಗಿಕೊಂಡಿದ್ದರು ಎಂದು ತಿಳಿದುಬಂದಿದೆ.

ದಾಳಿ ಸಂದರ್ಭದಲ್ಲಿ ಅಡಗುದಾಣಗಳಿಂದ ಹಲವು ಉಗ್ರರು ಕಾಲ್ಕಿತ್ತಿದ್ದು, ಗಡಿ ಮೂಲಕ ಸಿರಿಯಾ ಒಳಗೆ ಪ್ರವೇಶ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅತ್ತ ಸಿರಿಯಾ ಪಡೆಗಳೂ ಕೂಡ ಉಗ್ರರ ಮೇಲೆ ದಾಳಿ  ನಡೆಸುತ್ತಿದ್ದು, ಇದೀಗ ಉಗ್ರರ ಪರಿಸ್ಥಿತಿ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ.

No Comments

Leave A Comment