Log In
BREAKING NEWS >
ನಡೆದಾಡುವ ದೇವರು “ಸಿದ್ದಗಂಗಾಶ್ರೀ” ಶಿವೈಕ್ಯ......ಜನವರಿ 25ಕ್ಕೆ ಬೆಳಿಗ್ಗೆ 9.30ಕ್ಕೆ ಉಡುಪಿಯ ಟಿ ಎ೦ ಎ ಪೈ ಹಿ೦ಬದಿಯಲ್ಲಿನ ಸ್ಥಳದಲ್ಲಿ ನೂತನ "ನಯಾಬ್ "ವಸತಿ ಸಮುಚ್ಚಾಯದ ಶಿಲಾನ್ಯಾಸ ಜರಗಲಿದೆ

ಅಪ್ರಾಪ್ತ ವಯಸ್ಕರು ಅಪಘಾತ ಎಸಗಿದರೆ ಪೋಷಕರಿಗೆ ಜೈಲು !

ಹೊಸದಿಲ್ಲಿ: ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸಿ ಸಿಕ್ಕಿಬಿದ್ದರೆ ಅಥವಾ ಇನ್ನೇ ನಾದರೂ ತೊಂದರೆಗೆ ಸಿಕ್ಕಿಹಾಕಿಕೊಂಡರೆ ಅಂಥವರಿಗೆ ಮಾತ್ರವಲ್ಲ ಅವರ ಪೋಷಕರು ಅಥವಾ ಹೆತ್ತವರಿಗೂ ಶಿಕ್ಷೆಯಾಗಲಿದೆ. ಕೇಂದ್ರ ಸಚಿವ ಸಂಪುಟ ಅನುಮೋದಿಸಿದ ಮೋಟಾರು ವಾಹನಗಳ (ತಿದ್ದುಪಡಿ) ಕಾಯ್ದೆಯಲ್ಲಿ ಇಂಥ ಒಂದು ಅಂಶವಿದೆ. ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡುವಾಗ ಅಪಘಾತ ಸಂಭವಿಸಿದರೆ, ಪೋಷಕರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲು ಕಾಯ್ದೆಯಲ್ಲಿ ಅವಕಾಶವಿದೆ. ಅಲ್ಲದೆ ಪೋಷಕರಿಗೆ ಲಕ್ಷ, ಲಕ್ಷ  ರೂ. ದಂಡ ಕೂಡ ಬೀಳಲಿದೆ.

ಇದರ ಜತೆಗೆ ಸಂಚಾರ ನಿಯಮ ಉಲ್ಲಂಸುವುದು  ಜೇಬಿಗೆ ಭಾರವಾಗಬಹುದು. ಮುಂದಿನ ವಾರವೇ ಈ ಮಸೂದೆ ಸಂಸತ್‌ನಲ್ಲಿ ಮಂಡನೆಯಾಗಿ ಅನು ಮೋದನೆ ಪಡೆದುಕೊಳ್ಳುವ ವಿಶ್ವಾಸದಲ್ಲಿದೆ ಸರಕಾರ. ತಿದ್ದುಪಡಿ ಆಗಿರುವ ನಿಯಮಗಳು ಜಾರಿಗೊಂಡಾಗ ಸಣ್ಣ ಸಾರಿಗೆ ನಿಯಮ ಉಲ್ಲಂ ಸಿ ದರೂ ಕನಿಷ್ಠ 5 ಸಾವಿರ ರೂ. ದಂಡ ಕಟ್ಟಲೇ ಬೇಕು. ಪ್ರಸ್ತುತ ಕಾನೂನಿನಂತೆ ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸುವ ದಂಡ ಹಾಲಿ ಪ್ರಮಾಣಕ್ಕಿಂತ 10 ಪಟ್ಟು ಹೆಚ್ಚಾಗಲಿದೆ. ಇದರೊಂದಿಗೆ ಹೀಗೆ ಶಿಕ್ಷೆ ಅವಧಿ, ದಂಡ ಪ್ರಮಾಣದಲ್ಲಿನ ಹೆಚ್ಚಳ, ಬದಲಾವಣೆಗಳಿಗೆ ಸಂಬಂಧಿಸಿದ ಮಸೂದೆಯನ್ನು ಬರುವ ವಾರ ಲೋಕಸಭೆ ಮುಂದೆ ತರಲು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನಿರ್ಧರಿಸಿದೆ. ಮಸೂದೆಗೆ ಒಪ್ಪಿಗೆ ಸಿಕ್ಕಿದರೆ, ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರಿಗೆ 2,000 ರೂ ಬದಲು 10 ಸಾವಿರ ರೂ., ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಚಾಲನೆ ಮಾಡುವ ಚಾಲಕರಿಗೆ 1,000 ಬದಲು 5 ಸಾವಿರ ರೂ. ದಂಡ ಬೀಳಲಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್‌ ಗಡ್ಕರಿ “ಅಪಘಾತ ಸಂಭವಿಸಿದಾಗ ಅಪಘಾತ ಎಸಗಿದವರಿಂದ ಸಂತ್ರಸ್ತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ದೊರೆಯಲಿದೆ. ಈ ಮೊತ್ತವನ್ನು ನಾಲ್ಕು ತಿಂಗಳೊಳಗೆ ಪಾವತಿಸುವುದು ಕಡ್ಡಾಯ’ ಎಂದು ತಿಳಿಸಿದ್ದಾರೆ.

ಜನಪ್ರತಿನಿಧಿಗಳಿಗೆ ದುಪ್ಪಟ್ಟು
ಸಿಗ್ನಲ್‌ ಜಂಪ್‌, ಸೀಟ್‌ಬೆಲ್ಟ್, ಹೆಲ್ಮೆಟ್‌ ಇಲ್ಲದೆ ಚಾಲನೆ ಮಾಡುವವರಿಗೆ 1000 ರೂ. ದಂಡ ವಿಧಿಸುವ ಜೊತೆಗೆ ಚಾಲನಾ ಪರವಾನಗಿಯನ್ನು ಮೂರು ತಿಂಗಳು ವಜಾಗೊಳಿಸಲಾಗುತ್ತದೆ. ವಿಶೇಷವೆಂದರೆ ಸಂಚಾರ ನಿಯಮ ಉಲ್ಲಂ ಸುವ ಜನಪ್ರತಿನಿಧಿಗಳು ಹಾಗೂ ಸರ್ಕಾರಿ ನೌಕರರಿಗೆ ದುಪ್ಪಟ್ಟು ದಂಡ ವಿಧಿಸಲು ಈ ಬದಲಾದ ಕಾಯ್ದೆ ಅವಕಾಶ ನೀಡಲಿದೆ

ಶೇ.30ರಷ್ಟು ನಕಲಿ ಪರವಾನಗಿ !
“ದೇಶದಲ್ಲಿ ಸುಮಾರು ಶೇ.30ರಷ್ಟು ನಕಲಿ ಚಾಲನಾ ಪರವಾನಗಿಗಳಿವೆ’ ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ. ಈ ರೀತಿಯ ನಕಲಿ ಡಿಎಲ್‌ ಸೃಷ್ಟಿ ಹಾಗೂ ಅಕ್ರಮಗಳನ್ನು ತಡೆಯಲು, ಇನ್ನು ಇ-ಆಡಳಿತದ ಅಡಿ, ವಿದ್ಯುನ್ಮಾನ ಮಾದರಿಯಲ್ಲಿ ನೋಂದಣಿ ಮಾಡಿಕೊಳ್ಳಲಾಗುವುದು. ಚಾಲಕ ಚಾಲನೆ ಪರೀಕ್ಷೆ ಪಾಸಾದ ಮೂರು ದಿನಗಳೊಳಗೆ ಕಡ್ಡಾಯವಾಗಿ ಡಿಎಲ್‌ ವಿತರಿಸಬೇಕು. ಮೂರು ದಿನದ ಮಿತಿ ಮೀರುವ ಆರ್‌ಟಿಒಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಚಿವರು ಹೇಳಿದ್ದಾರೆ.

ಸಾಮಾನ್ಯ ವ್ಯಕ್ತಿಯಾಗಲಿ, ಸೆಲೆಬ್ರಿಟಿ, ಜನಪ್ರತಿನಿಧಿ ಅಥವಾ ಪ್ರಭಾವಿಗಳಿರಲಿ ಚಾಲನಾ ಪರೀಕ್ಷೆ ಪಾಸು ಮಾಡದ ಹೊರತು ಡಿಎಲ್‌ ವಿತರಿಸ ಕೂಡದು ಎಂದು ಆರ್‌ಟಿಒಗಳಿಗೆ ಸೂಚಿಸಲಾಗಿದೆ ಎಂದು  ಗಡ್ಕರಿ ಹೇಳಿದ್ದಾರೆ.

ಎಲ್‌ಎಲ್‌ಆರ್‌ಗೆ ಆನ್‌ಲೈನ್‌ ಅರ್ಜಿ
ನಕಲಿ ಡಿಎಲ್‌ಗ‌ಳ ನಿಗ್ರಹ ಹಾಗೂ ಚಾಲನ ಪರವಾನಿಗೆ ಪಡೆಯುವ ಪ್ರಕ್ರಿಯೆಯನ್ನು ಸುಲಭವಾಗಿಸಲು ಮುಂದಾಗಿರುವ ಕೇಂದ್ರ ಸಾರಿಗೆ ಸಚಿವಾಲಯ, ಅರ್ಜಿ ಸಲ್ಲಿಕೆ, ನೋಂದಣಿ ಪ್ರಕ್ರಿಯೆಯನ್ನು ಇ-ಆಡಳಿತ ವ್ಯಾಪ್ತಿಗೆ ತರುತ್ತಿದೆ. ಇದರಂತೆ ಸಾರ್ವಜನಿಕರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ ಚಾಲನೆ ಕಲಿಕಾ ಪರವಾನಿಗೆ (ಎಲ್‌ಎಲ್‌ಆರ್‌) ಪಡೆಯಬಹುದು. ಆಧಾರ್‌ ಸಂಖ್ಯೆ ಆಧಾರಿತ ಮೌಲ್ಯಮಾಪನ ವ್ಯವಸ್ಥೆ ಮೂಲಕ ಇಂತಹ ಇ-ಅರ್ಜಿಗಳಿಗೆ ಅನುಮತಿ ನೀಡಲಾಗುತ್ತದೆ. ಇದರೊಂದಿಗೆ ಚಾಲನಾ ಪರವಾನಿಗೆ ಹೊಂದಿರುವವರ ಮಾಹಿತಿ ದೇಶದ ಎಲ್ಲ ಆರ್‌ಟಿಒಗಳಲ್ಲಿ ಲಭ್ಯವಿರಲಿದ್ದು, ಯಾವುದೇ ವ್ಯಕ್ತಿ ಎರಡೆರಡು ಬಾರಿ ಡಿಎಲ್‌ ಪಡೆಯಲು ಸಾಧ್ಯವಾಗುವುದಿಲ್ಲ.

ಯಾವುದಕ್ಕೆ  ಎಷ್ಟು ದಂಡ?
ಮದ್ಯ ಸೇವಿಸಿ ವಾಹನ ಚಾಲನೆಗೆ 10,000 ರೂ.
ಚಾಲನೆ ವೇಳೆ ಮೊಬೈಲ್‌ ಬಳಸಿದರೆ 5,000 ರೂ.
ಸಿಗ್ನಲ್‌ ಜಂಪ್‌, ಸೀಟ್‌ ಬೆಲ್ಟ್, ಹೆಲ್ಮೆಟ್‌ ರಹಿತ ಚಾಲನೆಗೆ 1,000 ರೂ.
ಅಪಘಾತ ಎಸಗಿದವ ರಿಂದ ಸಂತ್ರಸ್ತರಿಗೆ 5 ಲಕ್ಷ  ರೂ. ಪರಿಹಾರ

No Comments

Leave A Comment