Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ಬಾಳ್ಕುದ್ರು: ಫಿಶ್‌ ಕಟ್ಟಿಂಗ್‌ ಘಟಕ ತೆರವಿಗೆ ಆಗ್ರಹ

ಕೋಟ: ಐರೋಡಿ  ಗ್ರಾ.ಪಂ.ವ್ಯಾಪ್ತಿಯ ಬಾಳ್ಕುದ್ರುವಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಫಿಶ್‌ ಕಟ್ಟಿಂಗ್‌  ಘಟಕವನ್ನು ತೆರವುಗೊಳಿಸಲು   ಹೈಕೋರ್ಟ್‌ ಆದೇಶಿಸಿದರು ಸ್ಥಳೀಯ  ಗ್ರಾ.ಪಂ. ಯಾವುದೇ ಕ್ರಮಕೈಗೊಂಡಿಲ್ಲ  ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಾ.27ರಂದು  ಐರೋಡಿ ಗ್ರಾ.ಪಂ.ನಲ್ಲಿ ನಡೆಯಿತು.

ಈ ಸಂದರ್ಭ ಬಾಳ್ಕುದ್ರು ಹಿತರಕ್ಷಣಾ ಸಮಿತಿಯ  ಮುಖ್ಯಸ್ಥ  ಡೆನ್ನಿಸ್‌ ಡಿಸೋಜಾ ಮಾತನಾಡಿ, ಬಾಳ್ಕುದ್ರುವಿನಲ್ಲಿ ಈ  ಹಿಂದೆ ಫಿಶ್‌ಮಿಲ್‌ ಸ್ಥಾಪನೆಗೆ ಪ್ರಯತ್ನ ನಡೆದಿದ್ದು, ಗ್ರಾಮಸ್ಥರ ಹೋರಾಟದ ಮೂಲಕ ಅದನ್ನು ತಡೆಯಲಾಗಿದೆ  ಹಾಗೂ  ಈ ಹೋರಾಟದ ಫಲವಾಗಿ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಫಿಶ್‌  ಕಟ್ಟಿಂಗ್‌ ಘಟವನ್ನೂ  ತೆರವುಗೊಳಿಸುವಂತೆ ಹೈಕೋರ್ಟ್‌ ಆದೇಶ ನೀಡಿದೆ.  ಗ್ರಾ.ಪಂ.ಗೆ  ಆದೇಶ  ಪ್ರತಿ  ಹಾಗೂ ಮನವಿಯನ್ನು ನೀಡಿ ಕ್ರಮಕೈಗೊಳ್ಳುವಂತೆ ವಿನಂತಿಸಿ ತಿಂಗಳು  ಕಳೆದಿದೆ. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ  ಎಂದು ಆಕ್ರೋಶ ವ್ಯಕ್ತಪಡಿಸಿದರು  ಹಾಗೂ ಶೀಘ್ರ ಕ್ರಮಕೈಗೊಳ್ಳದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಆದೇಶ  ಪ್ರತಿ ತಲುಪಿಲ್ಲ:   ಈ ಕುರಿತು  ಪ್ರತಿಕ್ರಿಯೆ ನೀಡಿದ ಐರೋಡಿ  ಗ್ರಾ.ಪಂ. ಪಿ.ಡಿ.ಓ.  ಸುಭಾಷ್‌  ಖಾರ್ವಿ, ಹೈಕೋರ್ಟ್‌ ಆದೇಶದ  ಪ್ರತಿ ಪಂಚಾಯತ್‌ಗೆ ತಲುಪಿಲ್ಲ. ಆದ್ದರಿಂದ  ಕ್ರಮಕೈಗೊಳ್ಳಲು ಸಾಧ್ಯವಿಲ್ಲ. ಆದೇಶ ಕೈಸೇರಿದ  ಮೇಲೆ ಮುಂದಿನ ಕ್ರಮಕೈಗೊಳ್ಳುವುದಾಗಿ ತಿಳಿಸಿದರು ಹಾಗೂ ಗ್ರಾ.ಪಂ. ಅಧ್ಯಕ್ಷ ಮೋಸೆಸ್‌ ರೋಡ್ರಿಗಸ್‌ ಮಾತನಾಡಿ,  ಈ  ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

No Comments

Leave A Comment