Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಸಚಿನ್, ರೇಖಾ ಸದನಕ್ಕೆ ಗೈರು; ಆಸಕ್ತಿ ಇಲ್ಲದಿದ್ದರೆ ರಾಜೀನಾಮೆ ಕೊಡಲಿ: ಸಂಸದ ನರೇಶ್ ಅಗರ್ ವಾಲ್

ನವದೆಹಲಿ: ರಾಜ್ಯಸಭೆಗೆ ನಾಮ ನಿರ್ದೇಶಿತ ಸದಸ್ಯರುಗಳಾದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತು ಬಾಲಿವುಡ್ ನಟಿ ರೇಖಾ ಅವರ ಸತತ ಗೈರು ಹಾಜರಿ ಸಂಸದ ನರೇಶ್ ಅಗರ್ ವಾಲ್ ಅವರನ್ನು ಕೆರಳಿಸಿದೆ.

ರಾಜ್ಯಸಭೆಗೆ ನಾಮ ನಿರ್ದೇಶಿತವಾಗಿರುವ ಸಚಿನ್ ಮತ್ತು ನಟಿ ರೇಖಾ ಅವರಿಗೆ ಸದನಕ್ಕೆ ಬರಲು ಆಸಕ್ತಿ ಇಲ್ಲವೆಂದಾದರೇ ಅವರಿಬ್ಬರೂ ರಾಜೀನಾಮೆ ನೀಡಬಾರದೇಕೆ ಎಂದು ರಾಜ್ಯಸಭೆ ಉಪ ಸಭಾಪತಿ ಜೆ.ಕುರಿಯನ್ ಅವರನ್ನು ಪ್ರಶ್ನಿಸಿದ್ದಾರೆ.

ನಾಮನಿರ್ದೇಶಿತ ಸದಸ್ಯರು ರಾಜ್ಯಸಭೆಗೆ ಬರುತ್ತಿಲ್ಲ ಎಂದಾದರೆ, ಅವರಿಗೆ ಸದನದಲ್ಲಿ ಭಾಗವಹಿಸಲು ಆಸಕ್ತಿ ಇಲ್ಲ ಎಂಬುದರ ಅರ್ಥವೇ?, ಒಂದು ವೇಳೆ ಅವರಿಗೆ ಸದನದಲ್ಲಿ ಭಾಗವಹಿಸಲು ಆಸಕ್ತಿ ಇಲ್ಲವೆಂದಾದರೆ ಅವರು ರಾಜಿನಾಮೆ ನೀಡಬಾರದೇಕೆ ಎಂದು ಕುಟುಕಿದ್ದಾರೆ.

ಈ ಸಂಬಂಧ ಎಲ್ಲಾ ಸದಸ್ಯರಿಗೂ ಪತ್ರ ಬರೆಯುವುದಾಗಿ ಸಮಾಜವಾದಿ ಪಕ್ಷದ ಸಂಸದ ನರೇಶ್ ಅಗರ್ ವಾಲ್ ಹೇಳಿದ್ದಾರೆ. ರಾಜ್ಯ ಸಭೆಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ 12 ಮಂದಿಯನ್ನು ನಾಮ ನಿರ್ದೇಶನ ಮಾಡಲಾಗುತ್ತದೆ.

ಕಲೆ, ವಿಜ್ಞಾನ, ಸಾಹಿತ್ಯ ಕ್ರೀಡೆ, ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ನೇಮಕ ಮಾಡಲಾಗುತ್ತದೆ. ಸಚಿನ್ ತೆಂಡೂಲ್ಕರ್ ಮತ್ತು ರೇಖಾ ಸೇರಿದಂತೆ ಅನು ಅಗಾ, ಸಂಭಾಜಿ ಛತ್ರಪತಿ, ಸ್ವಪನ್ ದಾಸ್ ಗುಪ್ತಾ, ರೂಪಾ ಗಂಗೂಲಿ, ನರೇಂದ್ರ ಜಾಧವ್, ಮೇರಿ ಕೋಮ್, ಕೆ. ಪರಾಸರನ್, ಗೋಪಿ ಸುರೇಶ್, ಸುಬ್ರಮಣಿಯನ್ ಸ್ವಾಮಿ ಅವರುಗಳು ರಾಜ್ಯ ಸಭೆಯ ನಾಮ ನಿರ್ದೇಶಿತ ಸದಸ್ಯರಾಗಿದ್ದಾರೆ.

No Comments

Leave A Comment