Log In
BREAKING NEWS >
ಶಿರಾ ಲಾರಿ -ಬಸ್ಸು ಭೀಕರ ರಸ್ತೆ ಅಪಘಾತ 7 ಮಂದಿ ದುರ್ಮರಣ......ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಇಂಧನ ದರ-ಪೆಟ್ರೋಲ್‌, ಡೀಸೆಲ್‌ ದರ ಗರಿಷ್ಠ ಮಟ್ಟಕ್ಕೆ

ಮಂಗಳೂರು: ತಣ್ಣೀರ್ ಬಾವಿ ಟ್ರೀ ಪಾರ್ಕ್, ಲೈಬ್ರರಿಗೆ ದುಷ್ಕರ್ಮಿಗಳಿಂದ ಬೆಂಕಿ

ಮಂಗಳೂರು: ಮಂಗಳೂರಿನ ಬೀಚ್ ನಲ್ಲಿರುವ ತಣ್ಣೀರ್ ಬಾವಿ ಟ್ರೀ ಪಾರ್ಕ್ ಗೆ ಅಪರಿಚಿತ ದುಷ್ಕರ್ಮಿಗಳು ಬುಧವಾರ ಮುಂಜಾನೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.

ಗ್ರಂಥಾಲಯದಲ್ಲಿದ್ದ 500 ಪುಸ್ತಕಗಳು, ಮರದ ಕಲಾಕೃತಿಗಳು , ಕಿಯಾಸ್ಕ್ ಮತ್ತು ಅರಣ್ಯ ಇಲಾಖೆಯ ಟಿಕೆಟ್ ಕೌಂಟರ್  ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ,ಕಿಡಿಗೇಡಿಗಳ ಕೃತ್ಯದಿಂದ ಸುಮಾರು 7 ಲಕ್ಷ ರು. ಮೌಲ್ಯದ ವಸ್ತುಗಳಿಗೆ ಹಾನಿಯಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ದುಷ್ಕರ್ಮಿಗಳು ಬೆಂಕಿ ಹಚ್ಚಲು ಇಂಧನ ಬಳಸಿದ್ದಾರೆ ಎಂದು ಅಗ್ನಿ ಶಾಮಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.  ಈ ಸಂಬಂಧ ಅರಣ್ಯ ಇಲಾಖೆ ಪಣಂಬೂರು ಠಾಣೆಯಲ್ಲಿ ದೂರು ದಾಖಲಿಸಿದೆ.

No Comments

Leave A Comment