Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ಲೋಕಸಭೆಯಲ್ಲಿ ಚರ್ಚೆ- ಒಂದು ದೇಶ ಒಂದು ತೆರಿಗೆ ಎಂಬುದು ಮಿಥ್ಯ: ಅರುಣ್‌ ಜೇಟ್ಲಿ

ಲೋಕಸಭೆಯಲ್ಲಿ ಜಿಎಸ್‌ಟಿ ಮಸೂದೆಗೆ ಸಂಬಂಧಿಸಿದ ಚರ್ಚೆಯನ್ನು ವಿತ್ತ ಸಚಿವ ಅರುಣ್‌ ಜೇಟ್ಲಿ ಬುಧವಾರ ಆರಂಭಿಸಿದರು. ಚರ್ಚೆಯಲ್ಲಿ ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆ, ಏಕೀಕೃತ ಸರಕು ಮತ್ತು ಸೇವಾ ತೆರಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದ ವಿಚಾರಗಳ ಕುರಿತಾಗಿ ಸಂಜೆ 6ಗಂಟೆ ವರೆಗೂ ಚರ್ಚೆ ನಡೆಯಲಿದೆ.

ಕೇಂದ್ರ ಸರ್ಕಾರ ಉಭಯ ಸದನಗಳ ಒಮ್ಮತ ಸಾಧಿಸಿ ಜುಲೈ 1 ರಿಂದ ಮಸೂದೆಯನ್ನು ಜಾರಿಗೆ ತರುವ ಯೋಜನೆ ಹಾಕಿಕೊಂಡಿದೆ.  ಸದ್ಯ ನಡೆಯುತ್ತಿರುವ ಚರ್ಚೆಯ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

*

12.20: ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಸದನಕ್ಕೆ ಹಾಜರು

12.30: ಸದನದ ಒಮ್ಮತ ಹಾಗೂ ಸಹಕಾರದ ಮೇರೆಗೆ ಅರುಣ್‌ ಜೇಟ್ಲಿ ಅವರಿಂದ ಜಿಎಸ್‌ಟಿ ಗೆ ಸಂಬಂಧಿಸಿದ ಭಾಷಣ ಆರಂಭ

12.35: ಕಾಂಗ್ರೆಸ್‌ ಆಳಿತ ಕಾಲದಲ್ಲಿಯೇ ಐತಿಹಾಸಿಕ ಜಿಎಸ್‌ಟಿಗೆ ಕಾಯ್ದೆ ಮಸೂದೆ ಜಾರಿಗೆ ನಿರ್ಧರಿಸಲಾಗಿತ್ತು. ಆದರೆ ವಿರೋಧ ಪಕ್ಷಗಳು ಇದನ್ನು ವಿರೋಧಿಸಿದ್ದವು– ಕಾಂಗ್ರೆಸ್‌ ಸಂಸದ ವೀರಪ್ಪ ಮೊಯ್ಲಿ

12.39: ಜಿಎಸ್‌ಟಿಗೆ ವಿರೋಧಿಸಿದ್ದರಿಂದಾಗಿ ಕಳೆದ 9ವರ್ಷಗಳಲ್ಲಿ 12ಲಕ್ಷ ಕೋಟಿ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ– ಮೊಯ್ಲಿ

12.50: ಒಂದು ದೇಶ ಒಂದು ತೆರಿಗೆ ಎಂಬುದು ಮಿಥ್ಯ. ಇಂದು ಕೈಗೊಳ್ಳುತ್ತಿರುವ ನಿರ್ಧಾರ ಎಲ್ಲಕ್ಕೂ ಪರಿಹಾರವಲ್ಲ ಆದರೆ ಆ ನಿಟ್ಟಿನಲ್ಲಿ ಇಡುತ್ತಿರುವ ಒಂದು ಮಹತ್ತರವಾದ ಹೆಜ್ಜೆ ಅಷ್ಟೆ– ಮೊಯ್ಲಿ

01.40: ಜಿಎಸ್‌ಟಿ ಇಂದಾಗಿ ರಾಜ್ಯಗಳ ಆರ್ಥಿಕ ಸ್ವಾಯತ್ತತೆಯ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ತಮಿಳುನಾಡು ಎಐಡಿಎಂಕೆ ಸಂಸದ ಟಿಜಿ ವೆಂಕಟೇಶ್‌ ಬಾಬು ಅವರಿಂದ ವಿವರ

1.48: ಭಾರತ ಕೃಷಿ ಪ್ರಧಾನ ಆರ್ಥಿಕ ವ್ಯವಸ್ಥೆ ಹೊಂದಿರುವ ದೇಶ. ಜಿಎಸ್‌ಟಿ ದೇಶದ ಕೃಷಿ ಮೇಲೆ ಯಾವುದೇ ಪ್ರಭಾವ ಉಂಟಾಗದು. ಆದರೆ ವಾಣಿಜ್ಯ ತೆರಿಗೆ ವಲಯದಲ್ಲಿ ಆತಂಕ ಉಂಟಾಗಲಿದೆ– ಟಿಜಿ ವೆಂಕಟೇಶ್‌ ಬಾಬು

1.55: ಮಮತಾ ಬ್ಯಾನರ್ಜಿ ಅವರಿಂದ 2009ರಲ್ಲೇ ಜಿಎಸ್‌ಟಿ ಗೆ ಬೆಂಬಲ

2.20: ಒಡಿಸ್ಸಾದ ಕಟಕ್‌ ಕ್ಷೇತ್ರ ಪ್ರತಿನಿಧಿಸುವ ಬಿಜೆಡಿಯ ಭಾತೃಹರಿ ಮೆಹ್ತಾಬ್‌ ಚರ್ಚೆಯಲ್ಲಿ ಭಾಗಿ

2.40: ಶಿವಸೇನಾ ದಿಂದ ಜಿಎಸ್‌ಟಿಗೆ ಬೆಂಬಲವಿದೆ. ಆದರೆ ತೆರಿಗೆ ಪಟ್ಟಿಯಲ್ಲಿ ಪೆಟ್ರೋಲಿಯಂ ಹಾಗೂ ಮದ್ಯವನ್ನು ಸೇರಿಸದಿರುವುದು ಯಾಕೆ? – ಸಂಸದ ಅಮರಾವತಿ

No Comments

Leave A Comment