Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ಏಪ್ರಿಲ್‍ನಿಂದ ನಿಷೇಧ ಜಾರಿ ಸಾಧ್ಯತೆ ಬಿಜೆಪಿ ಅಧಿಕಾರದಲ್ಲಿರುವ 5 ರಾಜ್ಯಗಳಲ್ಲಿಯೂ ‘ಅನಧಿಕೃತ’ ಮಾಂಸದಂಗಡಿ ನಿಷೇಧ?

ನವದೆಹಲಿ: ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಅನಧಿಕೃತ ಕಸಾಯಿಖಾನೆ ಮತ್ತು ಮಾಂಸದಂಗಡಿಗಳಿಗೆ ನಿಷೇಧ ಹೇರಿದ ನಂತರ, ಬಿಜೆಪಿ ಅಧಿಕಾರದಲ್ಲಿರುವ 5 ರಾಜ್ಯಗಳಲ್ಲಿಯೂ ‘ಅನಧಿಕೃತ’ ಮಾಂಸದಂಗಡಿ ನಿಷೇಧ ಹೇರುವ ಬಗ್ಗೆ ಬಿಜೆಪಿ ಚಿಂತನೆ ನಡೆಸಿದೆ.

ಬಿಜೆಪಿ ಆಡಳಿತವಿರುವ ರಾಜಸ್ತಾನ, ಉತ್ತರಾಖಂಡ್, ಛತ್ತೀಸ್‍ಗಢ, ಜಾರ್ಖಂಡ್ ಮತ್ತು ಮಧ್ಯಪ್ರದೇಶದಲ್ಲಿ ಅನಧಿಕೃತ ಕಸಾಯಿಖಾನೆಗಳು ನಿಷೇಧಕ್ಕೊಳಗಾಗಲಿವೆ.

ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ವರದಿ ಪ್ರಕಾರ ಹರಿದ್ವಾರದಲ್ಲಿ 3, ರಾಯ್ಪುರ್‍‍ನಲ್ಲಿ  11 ಮತ್ತು ಇಂದೋರ್‍‍ನಲ್ಲಿರುವ 1 ಮಾಂಸದಂಗಡಿಯನ್ನು ಸರ್ಕಾರ ಮುಟ್ಟುಗೋಲು ಹಾಕಲಾಗಿದೆ.

ಇದರೊಂದಿಗೆ ಜೈಪುರ್‍‍ನಲ್ಲಿ ಏಪ್ರಿಲ್‍ನಿಂದ ಅನಧಿಕೃತ ಕಸಾಯಿಖಾನೆಗಳನ್ನು ಮುಚ್ಚಲಾಗುವುದು ಎಂದು ನಗರಾಡಳಿತ ಹೇಳಿದ್ದು, ಇಲ್ಲಿ 4,000 ಅನಧಿಕೃತ ಮಾಂಸದಂಗಡಿಗಳು ಬಂದ್ ಆಗಲಿವೆ. ಇಲ್ಲಿರುವ 4000 ಕಸಾಯಿಖಾನೆಗಳಲ್ಲಿ 950 ಕಸಾಯಿಖಾನೆಗಳ ಪರವಾನಗಿಯನ್ನು ಕಳೆದ ಮಾರ್ಚ್ 31ರಿಂದ ಕಾರ್ಪರೇಷನ್ ನವೀಕರಣಗೊಳಿಸಿಲ್ಲ ಎಂದು ಮಾಂಸ ಮಾರಾಟಗಾರರು ಹೇಳಿದ್ದಾರೆ.

ಮುನ್ಸಿಪಲ್ ಕಾರ್ಪರೇಷನ್ ಪರವಾನಗಿ ಶುಲ್ಕವನ್ನು  ₹10 ರಿಂದ ₹1,000ಕ್ಕೆ ಏರಿಸುವ ಪ್ರಸ್ತಾಪವನ್ನು ಅಂಗೀಕರಿಸಿದ್ದರೂ ಇಲ್ಲಿಯವರಿಗೆ ಗಜೆಟ್ ಅಧಿಸೂಚನೆಯನ್ನು ಹೊರಡಿಸಿಲ್ಲ, ಹಾಗಾಗಿ ಪರವಾನಗಿಯನ್ನು ನವೀಕರಿಸಿಲ್ಲ ಎಂದು ಜೈಪುರ ಮುನ್ಸಿಪಲ್ ಕಾರ್ಪರೇಷನ್ (ಜೆಎಂಸಿ) ಅಧಿಕಾರಿಗಳು ಹೇಳಿದ್ದಾರೆ.

ನಾವು ಪರವಾನಗಿ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದ್ದೆವು. ಆದರೆ ಅದು ಸ್ವೀಕೃತವಾಗಿಲ್ಲ. ನಾವು ಜೆಎಂಸಿ ನಿರ್ಧಾರದ ವಿರುದ್ಧ ಹೋರಾಡುತ್ತೇವೆ ಎಂದು ನ್ಯೂ ಜೈಪುರ್ ಮಾಂಸಮಾರಾಟಗಾರ ಸಂಘದ ಅಧ್ಯಕ್ಷ ಅಬ್ದುಲ್ ರಾಫುಖ್ ಖುರೇಷಿ ಹೇಳಿದ್ದಾರೆ.

No Comments

Leave A Comment