Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ "ಚ೦ಡಿಕಾ ಹೋಮ " ಕಾರ್ಯಕ್ರಮವು 19-10-2018ರ೦ದು ಜರಗಲಿದೆ....

ಬೇಸಿಗೆ ಜನಸಂದಣಿ ತಡೆಯಲು ಟಿಟಿಡಿ ಮಾಸ್ಟರ್ ಪ್ಲಾನ್; ವಾರದ ವಿಐಪಿ ದರ್ಶನ ರದ್ದು!

ತಿರುಪತಿ: ವಿಶ್ವಪ್ರಸಿದ್ಧ ತಿರುಪತಿ ತಿರುಮಲ ದೇವಾಲಯದಲ್ಲಿ ಬೇಸಿಗೆ ಜನಸಂದಣಿ ತಡೆಯುವ ನಿಟ್ಟಿನಲ್ಲಿ ಟಿಟಿಡಿ ಮಹತ್ವದ ನಿರ್ಣಯ ಕೈಗೊಂಡಿದ್ದು, ದರ್ಶನ ವ್ಯವಸ್ಥೆಯಲ್ಲಿ ಒಂದಷ್ಟು ನಿಯಮಾವಳಿಗಳನ್ನು ಜಾರಿಗೆ ತಂದಿದೆ.ಬೇಸಿಗೆಯಲ್ಲಿ ಭಕ್ತರ ದಂಡು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅತಿ ಗಣ್ಯ ಭಕ್ತಾದಿಗಳಿಗೆ ವಾರಾಂತ್ಯದಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಿದೆ.

ಹೀಗಾಗಿ ವಾರದ ದಿನಗಳಲ್ಲಿ ಅತಿ ಗಣ್ಯರಿಗೆ ದರ್ಶನ ವ್ಯವಸ್ಥೆ ಇರುವುದಿಲ್ಲ ಎಂದು ಟಿಟಿಡಿ  ಸ್ಪಷ್ಟಪಡಿಸಿದ್ದು, ಯಾವುದೇ ರೀತಿಯ ಶಿಫಾರಸ್ಸು ಪತ್ರಗಳನ್ನು ಪಡೆದು ವಿಐಪಿಗಳಿಗೆ ದರ್ಶನ ವ್ಯವಸ್ಥೆ ಕಲ್ಪಿಸಬಾರದು ಎಂದು ತನ್ನ ಎಲ್ಲ ಸಿಬ್ಬಂದಿಗಳಿಗೆ ಸೂಚನೆ ರವಾನಿಸಿದೆ ಎಂದು ತಿಳಿದುಬಂದಿದೆ.ಸೋಮವಾರ ತಿರುಮಲದ ಅನ್ನಮಯ್ಯ ಭವನದಲ್ಲಿ ನಡೆದ ಟಿಟಿಡಿ ಆಡಳಿತ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದ್ದು, ಟಿಟಿಡಿ ಪ್ರಧಾನ ಕಾರ್ಯ ನಿರ್ವಹಣಾ ಅಧಿಕಾರಿ ಸಾಂಭಶಿವರಾವ್ ಅವರ ನೇತೃತ್ವದಲ್ಲಿ ನಿರ್ಧಾರ  ಕೈಗೊಳ್ಳಲಾಗಿದೆ.

ಸಭೆಯ ನಿರ್ಣಯದಂತೆ ಬೇಸಿಗೆಯಲ್ಲಿ ದೇವಾಲಯಕ್ಕೆ ಅಪಾರ ಪ್ರಮಾಣದ ಭಕ್ತಾದಿಗಳು ಆಗಮಿಸಲಿದ್ದು, ಇದೇ ಕಾರಣಕ್ಕೆ ವಾರದ ದಿನಗಳಲ್ಲಿ ವಿಐಪಿ ದರ್ಶನ ವ್ಯವಸ್ಥೆಯನ್ನು ರದ್ದುಗೊಳಿಸಲಾಗಿದೆ. ವಾರದ  ದಿನಗಳು ಅಂದರೆ ಸೋಮವಾರದಿಂದ ಗುರುವಾರದವರೆಗೂ ಯಾವುದೇ ರೀತಿಯ ವಿಐಪಿ ದರ್ಶನವಿರುವುದಿಲ್ಲ.

300 ಮತ್ತು 1000 ರು.ಗಳ ವಿಶೇಷ ದರ್ಶನ ಟಿಕೆಟ್ ಗಳನ್ನು ರದ್ದು ಮಾಡಲಾಗಿದ್ದು, ಲಿಸ್ಟ್ 2 (ಸಚಿವರು, ಶಾಸಕರು,  ಎಂಎಲ್ ಸಿಗಳು) ಮತ್ತು ಲಿಸ್ಚ್ 3 (ಸರ್ಕಾರದ ಉನ್ನತ ಅಧಿಕಾರಿಗಳು, ಟಿಟಿಡಿ ಆಡಳಿತ ಸಿಬ್ಬಂದಿಗಳು) ಭಕ್ತರು ವಾರಾಂತ್ಯದಲ್ಲಿ ಮಾತ್ರ ದರ್ಶನ ಪಡೆಯಬಹುದಾಗಿದೆ. ಈ ನೂತನ ನಿಯಮ ಮುಂಬರು ಏಪ್ರಿಲ್ 7ರಿಂದ ಜಾರಿಗೆ  ಬರಲಿದೆ ಎಂದು ತಿಳಿದುಬಂದಿದೆ.

ವಾರಂತ್ಯದ ವೇಳೆ ಶಿಷ್ಠಾಚಾರದನ್ವಯ ದರ್ಶನ ಪಡೆಯುವ ಅತಿ ಗಣ್ಯರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಅರ್ಜಿತ ಸೇವೆಗಳ ಕುರಿತ ನಿರ್ಧಾರವನ್ನು ಮುಂದಿನ ಸಭೆಯಲ್ಲಿ ನಿರ್ಧರಿಸಲಾಗುತ್ತದೆ ಎಂದು ಸಾಂಭಶಿವರಾವ್ ಅವರು  ತಿಳಿಸಿದ್ದಾರೆ.

No Comments

Leave A Comment