Log In
BREAKING NEWS >
ನಾಡಿನ ಸಮಸ್ತ ಜನತೆಗೆ, ನಮೆಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನಾಗರ ಪ೦ಚಮಿ ಹಾಗೂ ನೇ ಸ್ವಾತ೦ತ್ರೋತ್ಸವದ ಶುಭಾಶಯಗಳು....

ಹೈದರಾಬಾದ್: 3 ಕೋಟಿ ರು. ಮೊತ್ತದ ನಿಷೇಧಿತ ನೋಟು ಹೊಂದಿದ್ದ 10 ಮಂದಿ ಬಂಧನ

ಸೈಫಾಬಾದ್: ಮೂರು ಕೋಟಿ ರುಪಾಯಿ ಮೊತ್ತದ ನಿಷೇಧಿತ ನೋಟುಗಳನ್ನು ಹೊಂದಿದ್ದ 10 ಮಂದಿ ತಂಡವನ್ನು ಸೈಫಾಬಾದ್ ಪೊಲೀಸರು ಕಳೆದ ರಾತ್ರಿ ಬಂಧಿಸಿದ್ದಾರೆ.

10 ಮಂದಿ ತಂಡ 3 ಕೋಟಿ ರುಪಾಯಿ ನಿಷೇಧಿತ ನೋಟುಗಳನ್ನು ಹೊಂದಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಈ ವೇಳೆ 10 ಮಂದಿಯನ್ನು ಬಂಧಿಸಿದ್ದು 3 ಕೋಟಿ ರುಪಾಯಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರ, ನಕಲಿ ನೋಟು ಹಾವಳಿ ತಡೆಯುವ ಸಲುವಾಗಿ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದರು.

No Comments

Leave A Comment