ಇಂಟಕ್ ರಾಜ್ಯಾಧ್ಯಕ್ಷರಾಗಿ ರಾಕೇಶ್ ಮಲ್ಲಿ ಆಯ್ಕೆಮಂಗಳೂರು: ಇಂಡಿಯನ್ ನ್ಯಾಶನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಇಂಟಕ್) ರಾಜ್ಯಾಧ್ಯಕ್ಷರಾಗಿ ರಾಕೇಶ್ ಮಲ್ಲಿ ಅವರು ಆಯ್ಕೆಯಾಗಿದ್ದಾರೆ. ಇಂಟಕ್ ಅಧ್ಯಕ್ಷ ಡಾ| ಜಿ. ಸಂಜೀವ ರೆಡ್ಡಿ ಅವರು ಇಂಟಕ್ ರಾಜ್ಯ ಶಾಖೆಯ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದು, ಕಾರ್ಯಾಧ್ಯಕ್ಷರಾಗಿ ಎಸ್.ಎಸ್. ಪ್ರಕಾಶಂ, ಪೋಷಕರಾಗಿ ಸಚಿವ ಕೆ.ಜೆ.ಜಾರ್ಜ್, ಸಲಹೆಗಾರರಾಗಿ ಎನ್. ಎಂ. ಅಡ್ಯಂತಾಯ, ಉಪಾಧ್ಯಕ್ಷರಾಗಿ ಸನತ್ ಕುಮಾರ್, ಎನ್.ಆರ್. ಹೆಗ್ಡೆ, ಎನ್.ಎಂ. ಮುತ್ತಪ್ಪ, ಎನ್.ರವೀಂದ್ರ, ಸಿ.ಎ. ರಹೀಮ್ ಮತ್ತು ಎಂ. ಕೆ. ಸುಹೈಲ್ ಅವರು ಆಯ್ಕೆಯಾಗಿರುತ್ತಾರೆ.ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಕೇಶ್ ಮಲ್ಲಿಯವರು ಈ ಹಿಂದೆ ಜಿಲ್ಲಾ ಹಾಗೂ ರಾಜ್ಯ ಇಂಟಕ್ನ ಪದಾಧಿಕಾರಿಯಾಗಿದ್ದರು. ರಾಜ್ಯ ಅಮೆಚೂರು ಕಬಡ್ಡಿ ಸಂಸ್ಥೆಯ ಚೇರ್ಮನ್ ಹಾಗೂ ವಿಕಲಾಂಗ ಕ್ರೀಡಾ ಮತ್ತು ಸಂಸ್ಕೃತಿ ಅಕಾಡೆಮಿಯ ಗೌರವಾಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ ಇಂಟಕನ್ನು ಸದೃಢವಾಗಿ ಬೆಳೆಸುವುದು. ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಏಳಿಗೆಗಾಗಿ ತೊಡಗಿಸಿಕೊಳ್ಳುವುದು. ಅವರಿಗೆ ಸಿಗುವ ಸೌಲಭ್ಯಗಳನ್ನು ದೊರಕಿಸಿಕೊಡುವ ಜತೆಗೆ ಗ್ರಾಮೀಣ ಮಟ್ಟದಿಂದ ರಾಜ್ಯದವರೆಗೂ ಇಂಟಕ್ ಸಂಘಟನೆಯನ್ನು ಬಲಪಡಿಸುವ ಗುರಿ ಇದೆ ಎಂದು ಮಲ್ಲಿ ತಿಳಿಸಿದ್ದಾರೆ.