Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಶರವೇಗದ ಬೌಲರ್ ಆಸ್ಟ್ರೇಲಿಯಾ ವೇಗಿ ಶಾನ್ ಟೈಟ್ ಕ್ರಿಕೆಟ್ ಗೆ ವಿದಾಯ

ಸಿಡ್ನಿ: ಇತ್ತೀಚೆಗಷ್ಟೇ ಆಸ್ಟ್ರೇಲಿಯಾದ ವೇಗಿ ಶಾನ್ ಟೈಟ್ ಸಾಗರೋತ್ತರ ಭಾರತೀಯ ನಾಗರಿಕ ಪಾಸ್ ಪೋರ್ಟ್ ಪಡೆದಿದ್ದು ಇದರ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದಾರೆ.

ಟೆಸ್ಟ್ ಕ್ರಿಕೆಟ್ ನಲ್ಲಿ ಶರವೇಗದ ಎಸೆತವೊಂದನ್ನು ಹಾಕಿದ ದಾಖಲೆ ನಿರ್ಮಿಸಿದ್ದ ಶಾನ್ ಟೈಟ್ ಅವರು ತಮ್ಮ ಕ್ರಿಕೆಟ್ ಬದುಕನ್ನು ಗುಣವಾಗದ ಮೊಣಕೈ ಗಾಯದ ನೋವು ಬಲಿ ಪಡೆದಿದೆ ಎಂದು ಸ್ವತಃ ತಿಳಿಸಿದ್ದಾರೆ. ಆಸ್ಟ್ರೇಲಿಯಾ ತಂಡವನ್ನು ಮೂರು ಮಾದರಿಗಳಲ್ಲಿ ಪ್ರತಿನಿಧಿಸಿದ್ದ ಟೈಟ್ 3 ಟೆಸ್ಟ್, 35 ಏಕದಿನ ಹಾಗೂ 21 ಟಿ20 ಪಂದ್ಯಗಳನ್ನು ಆಡಿದ್ದಾರೆ.

2010ರ ಲಾರ್ಡ್ಸ್ ಟೆಸ್ಟ್ ನಲ್ಲಿ ಗಂಟೆಗೆ 161.1 ಕಿ.ಮೀ ವೇಗದಲ್ಲಿ ಬೌಲ್ ಮಾಡಿ 2ನೇ ಅತ್ಯಂತ ವೇಗದ ಎಸೆತದ ದಾಖಲೆಯನ್ನು ಸರಿಗಟ್ಟಿದ್ದರು.

No Comments

Leave A Comment