Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಮಣಿಪುರದಲ್ಲಿ ಬಸ್ಸು ತೊರೆಗೆ ಉರುಳಿ 10 ಸಾವು, 25 ಮಂದಿಗೆ ಗಾಯ

ಇಂಪಾಲ : ಮಣಿಪುರದ ಸೇನಾಪತಿ ಜಿಲ್ಲೆಯಲ್ಲಿ  ಇಂದು ನಸುಕಿನ ವೇಳೆ ಬಸ್ಸೊಂದು ತೊರೆಗೆ ಉರುಳಿ ಬಿದ್ದ ಪರಿಣಾಮವಾಗಿ 10 ಮಂದಿ ಮಡಿದು ಇತರ 25 ಮಂದಿ ಗಾಯಗೊಂಡರೆಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಇಂಪಾಲ – ಧಾಮಪುರ ನ್ಯಾಶನಲ್‌ ಹೈವೇ 39ರಲ್ಲಿನ ಮಾಕನ್‌ – ಛಕುಮಾಯಿ ನಡುವೆ ಈ ಭೀಕರ ಅವಘಡ ನಸುಕಿನ 3.30ರ ಹೊತ್ತಿಗೆ ನಡೆಯಿತು.

ರಾಜಧಾನಿಯಿಂದ 65 ಕಿ.ಮೀ.ದರದಲ್ಲಿ  ಘಟನಾ ತಾಣದಲ್ಲಿದ್ದ ತೊರೆಗೆ ಬಸ್ಸು ಉರುಳಿ ಬಿತ್ತು. ಆದರೆ ಅಪಘಾತದ ಕಾರಣವೇನೆಂದು ಈ ತನಕ ಗೊತ್ತಾಗಿಲ್ಲ.

ಗಾಯಾಳುಗಳನ್ನು ಸಮೀಪದ ಅಸ್ಸಾಂ ರೈಫ‌ಲ್ಸ್‌ ಮರಾಂ ಆಸ್ಪತ್ರೆಗೆ ಸೇರಿಸಲಾಗಿದೆ.

ಗಾಯಾಳುಗಳಲ್ಲಿ ಹಲವರ ಸ್ಥಿತಿ ಗಂಭೀರ ಇರುವ ಕಾರಣ ಮೃತರ ಸಂಖ್ಯೆ ಹೆಚ್ಚುವ ಭೀತಿ ಇದೆ ಎಂದು ಪೊಲೀಸರು ತಿಳಿದ್ದಾರೆ.

No Comments

Leave A Comment