Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಚೀನಾ: ಎರಡು ಚಿನ್ನದ ಗಣಿಗಳಲ್ಲಿ ದುರಂತ; ಕನಿಷ್ಟ 10 ಸಾವು, ಹಲವರಿಗೆ ಗಾಯ

ಬೀಜಿಂಗ್‌: ಚೀನಾದ ಎರಡು ಪ್ರತ್ಯೇಕ ಚಿನ್ನದ ಗಣಿ ಅಪಘಾತಗಳಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಮಂದಿ ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ.

ಕೇಂದ್ರ ಚೀನಾದ ಹೆನಾನ್ ಪ್ರಾಂತ್ಯದಲ್ಲಿರುವ 2 ಚಿನ್ನದ ಗಣಿಗಳಲ್ಲಿ ಕಳೆದ ರಾತ್ರಿ ಉಂಟಾದ 2 ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು 10 ಮಂದಿ ಕಾರ್ಮಿಕರು ಮೃತಪಟ್ಟಿದ್ದು, 12ಕ್ಕೂ ಹೆಚ್ಚು ಮಂದಿ ಗಣಿಯೊಳಗೆ ಸಿಲುಕಿದ್ದಾರೆ. ಲಿಂಗಬೋ  ನಗರದಲ್ಲಿರುವ ಚೈನಾ ನ್ಯಾಷನಲ್ ಗೋಲ್ಡ್ ಗ್ರೂಪ್ ನ ಕಿನ್ಲಿಂಗ್ ಗೋಲ್ಡ್ ಮೈನ್ ನಲ್ಲಿ ದಟ್ಟ ಹೊಗೆ ಅವರಿಸಿದ ಪರಿಣಾಮ 12 ಮಂದಿ ಕಾರ್ಮಿಕರು ಮತ್ತು 6 ನಿರ್ವಹಣಾ ಸಿಬ್ಬಂದಿಗಳು ಸಿಲುಕಿದ್ದು, ಈ ವರೆಗೂ ಈ ಗಣಿಯಲ್ಲಿ 7  ಮೃತದೇಹಗಳನ್ನು ಹೊರತೆಗೆಯಲಾಗಿದೆ. ಅಂತೆಯೇ 10 ಮಂದಿ ಗಾಯಾಳು ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಗಣಿ ಸಮೀಪದಲ್ಲೇ ಇರುವ ಮತ್ತೊಂದು ಗಣಿಯಲ್ಲೂ ಕಾರ್ಬನ್ ಮಾನಾಕ್ಸೈಡ್ ಸೋರಿಕೆಯಾದ ಪರಿಣಾಮ 16ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಗಣಿಯೊಳಗೆ ಸಿಲುಕಿದ್ದರು. 6 ಮಂದಿಕಾರ್ಮಿಕರನ್ನು ಜೀವಂತ  ಹೊರತೆಯಲಾಯಿತಾದರೂ ಮೂರು ಮಂದಿ ಕಾರ್ಮಿಕರು ಗಣಿಯೊಳಗೇ ಅಸುನೀಗಿದ್ದು, ಅವರ ಶವಗಳನ್ನು ಇದೀಗ ಹೊರತೆಗೆಯಲಾಗಿದೆ. ಗಣಿಯಲ್ಲಿ ಇನ್ನೂ ಹಲವು ಕಾರ್ಮಿಕರು ಸಿಲುಕಿರುವ ಶಂಕೆ ಇದ್ದು, ಕಾರ್ಯಾಚರಣೆ  ಭರದಿಂದ ಸಾಗಿದೆ.

 

No Comments

Leave A Comment