Log In
BREAKING NEWS >
ನಾಡಿನ ಸಮಸ್ತ ಜನತೆಗೆ,ಓದುಗರಿಗೆ,ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಕರಾವಳಿಕಿರಣ ಡಾಟ್ ಕಾ೦ ಬಳಗದ ಯುಗಾದಿ ಹಬ್ಬದ ಶುಭಾಶಯಗಳು.......ಮಾರ್ಚ್ 23 ರಿಂದ ಏಪ್ರಿಲ್ 6 ವರಗೆ SSLC ಪರೀಕ್ಷೆ ನಡೆಯಲಿದೆ. ಪರೀಕ್ಷೆ ದಿನಾ ಬೆಳಿಗ್ಗೆ 9 ರಿಂದ 1:30 ರ ವರೆಗೆ ನಡೆಯಲಿದೆ........ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ

ಸಿಮ್ ಕಾರ್ಡ್, ಪ್ಯಾನ್ ಕಾರ್ಡ್ ಗೂ ಇನ್ನು ಆಧಾರ್ ಕಡ್ಡಾಯ!

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಸಿಮ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಗಳಿಗೂ ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.ಮೊಬೈಲ್‌ ಸಿಮ್‌ ಕಾರ್ಡ್ ಪಡೆಯಲೂ ಆಧಾರ್‌ ನೀಡುವುದು ಶೀಘ್ರ ಕಡ್ಡಾಯವಾಗಲಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಟೆಲಿಕಾಂ ಕಂಪನಿಗಳಿಗೆ ಕೇಂದ್ರ ಸರ್ಕಾರ ನೋಟಿಸ್‌ ಜಾರಿ ಮಾಡಿದ್ದು, ಗ್ರಾಹಕರ ಸಿಮ್‌ ಕಾರ್ಡ್‌  ಗಳನ್ನು ಆಧಾರ್‌ ಜೊತೆ ಸಂಯೋಜನೆ ಖಚಿತಪಡಿಸಿಕೊಳ್ಳುವಂತೆ ಸೂಚಿಸಿದೆ. ಹಾಲಿ ಗ್ರಾಹಕರಿಗೂ ಈ ನಿಯಮ ಅನ್ವಯವಾಗಲಿದ್ದು, ಟೆಲಿಕಾಂ ಕಂಪನಿಗಳು ತನ್ನ ಎಲ್ಲಾ ಗ್ರಾಹಕರ ದಾಖಲೆಗಳನ್ನು ಮರು ಪರಿಶೀಲನೆ ನಡೆಸಲಿವೆ  ಎಂದು ತಿಳಿದುಬಂದಿದೆ.ಪ್ರಿಪೇಡ್‌ ಮತ್ತು ಪೋಸ್ಟ್‌ಪೇಡ್‌ ಗ್ರಾಹಕರು ಆಧಾರ್‌ ಕೆವೈಸಿ ಅರ್ಜಿಯನ್ನು ಭರ್ತಿ ಮಾಡಿಕೊಡಬೇಕಾಗುತ್ತದೆ. ಎಸ್‌ ಎಂಎಸ್‌ ಮೂಲಕ ಪರಿಶೀಲನಾ ಪ್ರಕ್ರಿಯೆ ನಡೆಯಲಿದ್ದು, ಗ್ರಾಹಕರಿಗೆ ಕಂಪನಿಗಳು ಪ್ರಮಾಣೀಕರಣ ಕೋಡ್‌  ಗಳನ್ನು ಕಳುಹಿಸಿಕೊಡಲಿವೆ.

ಆಧಾರ್‌ ಲಿಂಕ್‌ ಆಗದ ಪ್ಯಾನ್‌ ಕಾರ್ಡ್‌ ರದ್ದು?

ಇನ್ನು ಆದಾಯ ತೆರಿಗೆ ಪಾವತಿ, ಹೊಸ ಪ್ಯಾನ್‌ ಕಾರ್ಡ್‌ ಗೆ ಅರ್ಜಿ ಸಲ್ಲಿಸಲು ಆಧಾರ್‌ ಕಡ್ಡಾಯಗೊಳಿಸುವ ಮಸೂದೆಯನ್ನು ಲೋಕಸಭೆ ಅಂಗೀಕರಿಸಿದ ಬೆನ್ನಲ್ಲೇ ಈಗಾಗಲೇ ಪ್ಯಾನ್‌ ಕಾರ್ಡ್‌ ಹೊಂದಿದವರಿಗೂ ಆಧಾರ್‌  ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಡಿಸೆಂಬರ್ 31ರೊಳಗೆ ಪ್ಯಾನ್‌ ಕಾರ್ಡ್‌ ನಂಬರ್‌ಗೆ ಆಧಾರ್‌ ಸಂಖ್ಯೆ ಲಿಂಕ್ ಮಾಡದೇ ಇದ್ದಲ್ಲಿ, ಅಂತಹ ಪ್ಯಾನ್‌ ಕಾರ್ಡ್‌ಗಳ ಮಾನ್ಯತೆ ರದ್ದು ಪಡಿಸುವಂತಹ ಕ್ರಮವನ್ನು  ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.ಆದಾಯ ತೆರಿಗೆ ಪಾವತಿದಾರರು ತೆರಿಗೆ ಪಾವತಿ ವೇಳೆ ಕಡ್ಡಾಯವಾಗಿ ಪ್ಯಾನ್‌ ಸಂಖ್ಯೆ ನಮೂದಿಸಬೇಕಾಗಿದೆ. ವಿದ್ಯಾರ್ಥಿಗಳಂತಹ ತೆರಿಗೆ ವ್ಯಾಪ್ತಿಗಿಂತ ಹೊರಗಿರುವ ವ್ಯಕ್ತಿಗಳು ಗುರುತಿನ ಚೀಟಿಯಾಗಿ ಪ್ಯಾನ್‌ ಕಾರ್ಡ್‌  ಬಳಸುತ್ತಾರೆ. ಆದರೆ ಕೆಲವು ವ್ಯಕ್ತಿಗಳು ಅಕ್ರಮವಾಗಿ ಪ್ಯಾನ್‌ ಕಾರ್ಡ್‌ ಪಡೆದುಕೊಂಡಿದ್ದಾರೆ. ಆಧಾರ್‌ ಜತೆ ಜೋಡಣೆ ಮಾಡಿದರೆ ಒಬ್ಬೊಬ್ಬರೇ ಹಲವು ಪ್ಯಾನ್‌ ಕಾರ್ಡ್‌ ಹೊಂದಿರುವ ಪ್ರಕರಣಗಳನ್ನು ಪತ್ತೆ ಹಚ್ಚಬಹುದಾಗಿದೆ ಇದೇ  ಕಾರಣಕ್ಕೆ ಪ್ಯಾನ್ ಕಾರ್ಡ್ ಗೂ ಆಧಾರ್ ಲಿಂಕ್ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

No Comments

Leave A Comment