Log In
BREAKING NEWS >
ಶರತ್ ಮಡಿವಾಳ ಹತ್ಯೆ: ಆರೋಪಿ ಮಹಮದ್ ಷರೀಫ್ ಗೆ ಹೈಕೋರ್ಟ್ ಜಾಮೀನು....

ವಿರಾಜಪೇಟೆಯಲ್ಲಿ ಕಾಡಾನೆ ದಾಳಿ: ಕಾಲೇಜು ವಿದ್ಯಾರ್ಥಿನಿ ದಾರುಣ ಸಾವು

ವಿರಾಜಪೇಟೆ: ಇಲ್ಲಿನ ನೆಲ್ಲಿಕಾಡು ಎಂಬಲ್ಲಿ ಕಾಡಾನೆಯೊಂದು ಬೈಕ್‌ ಮೇಲೆ ದಾಳಿ ನಡೆಸಿದ ಪರಿಣಾಮ ಹಿಂಬದಿಯ ಸವಾರೆಯಾಗಿದ್ದ ಕಾಲೇಜು ವಿದ್ಯಾರ್ಥಿನಿ ದಾರುಣವಾಗಿ ಸಾವನ್ನಪ್ಪಿದ ದುರ್ಘ‌ಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

ರಸ್ತೆಯ ಮೇಲೆ ಬೈಕ್‌ಗೆ ಕಾಡಾನೆ ಅಡ್ಡ ಬಂದಿದ್ದು, ಈ ವೇಳೆ ಬೈಕ್‌ ಚಲಾಯಿಸುತ್ತಿದ್ದ ಸಹೋದರ ಪಾರಾದರೆ , ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿ ಸಫಾನಾ(20)ದಾರುಣವಾಗಿ ಆನೆಯ ದಾಳಿಗೆ ಸಿಲುಕಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.

ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.

ಆನೆಗಳು ಪದೇ ಪದೇ ದಾಳಿ ನಡೆಸುತ್ತಿದ್ದು ಜನರು ಭಯದಿಂದ ಸಂಚರಿಸಬೇಕಾಗಿದೆ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಗೋಣಿಕೊಪ್ಪ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸœಳಕ್ಕೆ ಪೊಲೀಸರು , ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.

No Comments

Leave A Comment