Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ "ಚ೦ಡಿಕಾ ಹೋಮ " ಕಾರ್ಯಕ್ರಮವು 19-10-2018ರ೦ದು ಜರಗಲಿದೆ....

ಅಪರಾಧಿತ ಹಿನ್ನಲೆಯ ಅಭ್ಯರ್ಥಿಗಳಿಗೆ ಚುನಾವಣೆಯಿಂದ ಆಜೀವ ನಿಷೇಧ: ಯೂನಿಯನ್ ಆಫ್ ಇಂಡಿಯಾಗೆ “ಸುಪ್ರೀಂ” ಪ್ರಶ್ನೆ

ನವದೆಹಲಿ: ಅಪರಾಧಿತ ಹಿನ್ನಲೆಯ ಅಭ್ಯರ್ಥಿಗಳ ಮೇಲೆ ಚುನಾವಣೆಯಿಂದ ಆಜೀವ ನಿಷೇಧ ಹೇರುವ ಕುರಿತು ನಿರ್ಧಾರ ಪ್ರಕಟಿಸುವಂತೆ ಯೂನಿಯನ್ ಆಫ್ ಇಂಡಿಯಾಗೆ ಸುಪ್ರೀಂ ಕೋರ್ಟ್ ಶುಕ್ರವಾರ ಸೂಚಿಸಿದೆ.

ಅಪರಾಧಿತ ಹಿನ್ನಲೆಯ ಅಭ್ಯರ್ಥಿಗಳ ಮೇಲೆ ಚುನಾವಣೆಯಿಂದ ಆಜೀವ ನಿಷೇಧ ಹೇರುವಂತೆ ಕೇಂದ್ರ ಚುನಾವಣಾ ಆಯೋಗ ಸಲ್ಲಿಸಿದ್ದ ಅರ್ಜಿಯ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಬಗ್ಗೆ 7 ದಿನಗಳಲ್ಲಿ ತಮ್ಮ ಅಭಿಪ್ರಾಯ ತಿಳಿಸುವಂತೆ ಯೂನಿಯನ್ ಆಫ್ ಇಂಡಿಯಾ ಸಂಸ್ಥೆಗೆ ನಿರ್ದೇಶಿಸಿದೆ. ಅಂತೆಯೇ ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 18ಕ್ಕೆ ಮುಂದೂಡಿದೆ.

ಕಾನೂನು ಆಯೋಗ ಸಲ್ಲಿಕೆ ಮಾಡಿದ್ದ 244 ಮತ್ತು 255ನೇ ವರದಿಗಳಿಗೆ ಅನುಮೋದನೇ ನೀಡಿರುವ ಕೇಂದ್ರ ಚುನಾವಣಾ ಆಯೋಗ ಅಪರಾಧಿತ ಹಿನ್ನಲೆಯ ಅಭ್ಯರ್ಥಿಗಳ ಚುನಾವಣೆಯಲ್ಲಿ ಪಾಲ್ಗೊಳ್ಳದಂತೆ ನಿರ್ದೇಶನ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಪ್ರಸ್ತುತ ಪ್ರಜಾಪ್ರತಿನಿಧಿ ಕಾಯ್ದೆಯ ಅನ್ವಯ ಜೈಲು ಶಿಕ್ಷೆ ಅನುಭವಿಸುವ ಅಪರಾಧಿತ ಅಭ್ಯರ್ಥಿಗಳಿಗೆ ಕನಿಷ್ಠ 6 ವರ್ಷಗಳ ಚುನಾವಣೆಯಿಂದ ಸ್ಪರ್ಧಿಸುವಂತಿಲ್ಲವಾದರೂ, ಮತ್ತಷ್ಟು ಕ್ರಮ ಕೈಗೊಳ್ಳಲು ಚುನಾವಣಾ ಆಯೋಗ ಮುಂದಾಗಿದೆ. ಇದೇ ಕಾರಣಕ್ಕೆ ಅಪರಾಧಿತ ಅಭ್ಯರ್ಥಿಗಳು ಚುನಾವಣೆಯಿಂದಲೇ ಸ್ಪರ್ಧಿಸದಂತೆ ಆಜೀವ ನಿಷೇಧ ಹೇರಬೇಕು ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

ಮುಕ್ತ ಮತ್ತು ಸ್ವತಂತ್ರ, ನಿಷ್ಪಕ್ಷಪಾತ ಚುನಾವಣೆ ನಡೆಸಲು ಈ ಕ್ರಮ ಅತ್ಯಗತ್ಯ ಎಂದು ಈ ಹಿಂದೆ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್ ನಲ್ಲಿ ತನ್ನ ವಾದ ಮಂಡಿಸಿತ್ತು.

No Comments

Leave A Comment