Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಅಸಾರಾಮ್ ಬಾಪು ಪ್ರಕರಣದ ಎಲ್ಲ ಸಾಕ್ಷ್ಯಾಧಾರಗಳಿಗೆ ಸಂಪೂರ್ಣ ಭದ್ರತೆ ಕಲ್ಪಿಸಿ: ಸುಪ್ರೀಂ ಕೋರ್ಟ್

ನವದೆಹಲಿ: ಸ್ವಯಂ ಘೋಷಿತ ದೇವಮಾನಹ ಅಸಾರಾಮ್ ಬಾಪು ವಿರುದ್ಧದ ಪ್ರಕರಣದ ವಿಚಾರಣೆ ನಿರ್ಣಾಯಕ ಹಂತ ತಲುಪಿರುವಂತೆಯೇ ಪ್ರಕರಣದ ಎಲ್ಲ ಸಾಕ್ಷ್ಯಾಧಾರಗಳಿಗೆ ಸಂಪೂರ್ಣ ಭದ್ರತೆ ಕಲ್ಪಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.

ಹರ್ಯಾಣ ಮತ್ತು ಉತ್ತರ ಪ್ರದೇಶ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ್ದು, ಯಾವುದೇ ರೀತಿಯಲ್ಲೂ ಸಾಕ್ಷಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಉಭಯ ರಾಜ್ಯ ಸರ್ಕಾರಗಳದ್ದು ಎಂದು  ಸುಪ್ರೀಂ ಕೋರ್ಟ್ ಹೇಳಿದೆ. ಅಂತೆಯೇ ಸಾಕ್ಷ್ಯಾಧಾರಗಳ ಮೇಲೆ ಪ್ರಭಾವ ಬೀರುವ ಯಾವುದೇ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಹರ್ಯಾಣ ಮತ್ತು ಉತ್ತರ ಪ್ರದೇಶ ಸರ್ಕಾರಗಳಿಗೆ ಸೂಚನೆ  ನೀಡಲಾಗಿದೆ.

ಕೇವಲ ಮಾಧ್ಯಮಗಳಲ್ಲಿ ಪ್ರಕಟವಾಗಿರುವಂತೆಯೇ ಈ ವರೆಗೂ ಅಸಾರಾಮ್ ಬಾಪು ಪ್ರಕರಣದಲ್ಲಿನ ಸಾಕ್ಷಿಗಳ ಪೈಕಿ 10 ಸಾಕ್ಷಿಗಳ ವಿರುದ್ಧ ಮಾರಣಾಂತಿಕ ಹಲ್ಲೆಗಳಾಗಿದ್ದು, ಈ ಪೈಕಿ ಈಗಾಗಲೇ ಮೂವರು ಸಾವನ್ನಪ್ಪಿದ್ದಾರೆ.  ಅಂತೆಯೇ 7 ಸಾಕ್ಷಿಗಳು ಇಂದಿಗೂ ಗಾಯಾಳುಗಳಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಹಿಂದೆ ಜೋಧ್ ಪುರ ಆಶ್ರಮದಲ್ಲಿ ಅಸಾರಾಂ ಬಾಪು ಮತ್ತು ಆತನ ಪುತ್ರ ನಾರಾಯಣ ಸಾಯಿ 16 ವರ್ಷದ ಬಾಲಕಿ ಮೇಲೆ ನಿರಂತರ  ಅತ್ಯಾಚಾರ ಗೈದಿದ್ದರು. ಈ ಬಗ್ಗೆ ಬಾಲಕಿ ದೂರು ನೀಡಿದ್ದಳು. ಇದೀಗ ಆ ಬಾಲಕಿಯ ತಂದೆ ಮೇಲೆ ಹಲ್ಲೆಯಾಗಿದ್ದು, ನಿರಂತರ ಬೆದರಿಕೆ ಕರೆಗಳು ಬರುತ್ತಿವೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.

No Comments

Leave A Comment