Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಮಣಿಪಾಲ:ಚಿನ್ನದ ವ್ಯಾಪಾರಿಯ ದರೋಡೆ ಪ್ರಕರಣ 7ಆರೋಪಿಗಳ ಬಂಧನ; ಚಿನ್ನ, ನಗದು ವಶ

ದಿನಾಂಕ 17/03/2017 ರಂದು ಕೇರಳ ತ್ರಿಶೂರ್‌ನ  ದಿಲೀಪ್ ಟಿ.ಡಿ ಎಂಬವರು ಚಿನ್ನಾಭರಣ ಹಾಗೂ ನಗದು ಹಣ ತೆಗೆದುಕೊಂಡು ಹಿರಿಯಡ್ಕದಲ್ಲಿ ಬಸ್ ಹತ್ತಿ ಉಡುಪಿ ಕಡೆಗೆ ಬಸ್ಸಿನಲ್ಲಿ ಹೋಗುತ್ತಿರುವಾಗ ಆರೋಪಿಗಳು ಬಸ್ಸಿನಲ್ಲಿ ಹಿಂಬಾಲಿಸಿ ಕೊಂಡು ಬಂದು ಮಣಿಪಾಲ ಡೌನ್‌ಟೌನ್‌ ಬಾರ್‌ ಬಳಿ ಬಸ್ಸಿನಿಂದ ಇಳಿಸಿ ಪಿಸ್ತೂಲ್‌ ತೋರಿಸಿ ಬಲವಂತದಿಂದ ಕಾರಿನಲ್ಲಿ ಹಾಕಿ ಅಪಹರಣ ಮಾಡಿಕೊಂಡು ಹೋಗಿ ಸುಮಾರು 1500 ಗ್ರಾಂ ಚಿನ್ನಾಭರಣ ಹಾಗೂ ನಗದು ರೂ. 2,57,200/- ರೂಪಾಯಿಯನ್ನು ದರೋಡೆ ಮಾಡಿಕೊಂಡು ನಂದಿಕೂರು ಎಂಬಲ್ಲಿ ಬಿಟ್ಟು ಹೋಗಿರುತ್ತಾರೆ ಎಂಬುದಾಗಿ ದೂರು ನೀಡಿದ್ದು . ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣಾ ಅ.ಕ್ರ 16/2017 ಕಲಂ 364, 395 ಐ.ಪಿ.ಸಿ, ಮತ್ತು ಕಲಂ 3 ಮತ್ತು 25 ಶಸ್ತ್ರಾಸ್ತ್ರ ಕಾಯ್ದೆ ರಂತೆ ಪ್ರಕರಣ ದಾಖಲಾಗಿರುತ್ತದೆ.

ಈ ಕುರಿತಂತೆ ಪಿರ್ಯಾದುದಾರರಾದ ದಿಲೀಪ್ ರವರನ್ನು ಕೂಲಂಕುಶವಾಗಿ ವಿಚಾರಣೆ ಮಾಡಲಾಗಿ, ದಿಲೀಪ್‌ ರವರು ತ್ರಿಶೂರ್‌ ನಗರದಿಂದ ಮಂಗಳೂರು,ಮೂಡಬಿದ್ರಿ, ಕಾರ್ಕಳ, ಉಡುಪಿ, ಪೆರ್ಡೂರು ಮುಂತಾದ ಕಡೆಗಳಲ್ಲಿ ಇರುವಂತಹ ಚಿನ್ನದ ಅಂಗಡಿಗಳಿಗೆ ಚಿನ್ನದ ಆಭರಣಗಳನ್ನುಸರಬರಾಜು ಮಾಡಿ,ಅವರಿಂದ ನಗದು ಪಡೆದು ಹಿಂದಿರುಗುವ ವ್ಯಾಪಾರವನ್ನು ಹಲವಾರು ವರ್ಷಗಳಿಂದ ನಡೆಸುತ್ತಿರುವುದು ತಿಳಿದುಬಂದಿರುತ್ತದೆ.

ಈ ಪ್ರಕರಣವು ಅತ್ಯಂತ ಗಂಭೀರ ಸ್ವರೂಪದ ಪ್ರಕರಣವಾಗಿದ್ದು ಜಿಲ್ಲಾ ಪೊಲೀಸ್‌ ವತಿಯಿಂದ 5 ತಂಡಗಳನ್ನುರಚನೆ ಮಾಡಿ  ಆರೋಪಿ ಹಾಗೂ ಸೊತ್ತು ಪತ್ತೆಗಾಗಿ ವಿವಿಧ ಕೆಲಸಗಳಲ್ಲಿ ನೇಮಕ ಮಾಡಲಾಗಿರುತ್ತದೆ.  ತನಿಖಾ ಕಾಲದಲ್ಲಿ ಹೆಚ್ಚಿನ ವಿಚಾರಣೆಯಿಂದ ಈ ಪ್ರಕರಣದಲ್ಲಿ ನಡೆದಂತಹ ಚಿನ್ನದ ವ್ಯಾಪಾರಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹ ಮಾಡಲಾಗಿರುತ್ತದೆ. ಇಂತಹ ಹಲವಾರು ವ್ಯಾಪಾರಿಗಳು ಕೇರಳ ರಾಜ್ಯದಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿರುವ ಚಿನ್ನದ ಅಂಗಡಿಗಳಿಗೆ ಆಭರಣಗಳನ್ನು ಸರಬರಾಜು ಮಾಡಿ ಹಣ ಪಡೆಯುವ ವ್ಯವಹಾರ ನಡೆಸುತ್ತಿರುವುದು ಕಂಡು ಬಂದಿರುತ್ತದೆ. ಇಂತಹ ವ್ಯಾಪಾರ ಕಾನೂನ ಬದ್ದವಾಗಿರುವ ಬಗ್ಗೆ ಈಗಾಗಲೇ ದಾಖಲೆಗಳನ್ನು ಸಲ್ಲಿಸುವಂತೆ ಪಿರ್ಯಾದುದಾರರು ಮತ್ತು ಇತರ ಸಂಬಂಧಪಟ್ಟವರಿಗೆ ತನಿಖಾಧಿಕಾರಿಯವರು ಸೂಚನೆ ನೀಡಿರುತ್ತಾರೆ. ಸದ್ರಿ ಪ್ರಕ್ರಣದಲ್ಲಿ ಉಡುಪಿ ಜಿಲ್ಲಾ ಪೊಲೀಸ್‌ ತಂಡದ ವತಿಯಿಂದ 7 ಜನರ ತಂಡವನ್ನು ದಸ್ತಗಿರಿ ಮಾಡಿ ಅವರಿಂದ ದರೋಡೆ ಮಾಡಿದ್ದ 876 ಗ್ರಾಂ ತೂಕದ 24,00,000 ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು 60,000 ಹಾಗೂ ಕೃತ್ಯಕ್ಕೆ ಬಳಸಿದ 2 ರಿಟ್ಜ್‌ ಹಾಗೂ 1ಚೆವರ್ಲೆಟ್‌ ಸೀಲ್‌ ಕಾರನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಇತರ ಆರೋಪಿಗಳ ದಸ್ತಗಿರಿಗೆ ಬಾಕಿ ಇರುತ್ತದೆ.

ಈ ಪ್ರಕರಣದ ಪ್ರಮುಖ ಆರೋಪಿ ಹರಿಕೃಷ್ಣ ಭಟ್, ಪ್ರಾಯ: 25 ವರ್ಷ, ತಂದೆ: ವಿಠಲ ಭಟ್, ವಾಸ: ಉಗ್ರಾಣಿಬೆಟ್ಟು, ಹರಿಖಂಡಿಕೆ, 41 ನೇ ಶಿರೂರು ಗ್ರಾಮ, ಉಡುಪಿ ತಾಲೂಕು ಎಂಬವನು ಪೆರ್ಡೂರಿನಲ್ಲಿ ಗಾಯತ್ರಿ ಜ್ಯುವೆಲ್ಲರಿ ಅಂಗಡಿ ಹೊಂದಿದ್ದು, ಪ್ರಕರಣದ ಫಿರ್ಯಾದಿದಾರರಾದ ದಿಲೀಪ್ ಎಂಬವರು ಈತನ ಅಂಗಡಿಗೆ ಚಿನ್ನಾಭರಣ ಮಾರಾಟ ಮಾಡಲು ಬರುತ್ತಿದ್ದರು. ಹರಿಕೃಷ್ಣ ಭಟ್‌ನಿಗೆ ದಿಲೀಪರವರು ಚಿನ್ನಾಭರಣ ಹಾಗೂ ಚಿನ್ನಾಭರಣ ಮಾರಾಟ ಮಾಡಿದ ನಗದು ಹಣ ತೆಗೆದುಕೊಂಡು ಒಬ್ಬರೇ ಹೋಗುವ ವಿಚಾರ ಗೊತ್ತಿದ್ದು, ಇತರ ಆರೋಪಿಗಳೊಂದಿಗೆ ಸೇರಿಕೊಂಡು ದಿಲೀಪ್‌ರವರನ್ನು ದರೋಡೆ ಮಾಡುವ ಬಗ್ಗೆ ಸಂಚು ರೂಪಿಸಿ, ಇತರ ಆರೋಪಿಗಳಿಂದ ದರೋಡೆ ಮಾಡಿಸಿರುತ್ತಾನೆ.

ಈ ಪ್ರಕರಣದ 2 ನೇ ಆರೋಪಿ ಮಹ್ಮದ್ ಇರ್ಫಾನ್ @ ಇರ್ಫಾನ್ ಪ್ರಾಯ: 30 ವರ್ಷ, ತಂದೆ: ಹೆಚ್. ಮಹ್ಮದ್ ಸಾಹೇಬ್, ವಾಸ: ರುಮೇಜಾ ಮಂಜಿಲ್, ಸಂತೋಷ ನಗರ, ಹೆಮ್ಮಾಡಿ ಗ್ರಾಮ ಮತ್ತು ಅಂಚೆ, ಕುಂದಾಪುರ ತಾಲೂಕು  ಎಂಬವನು ಇತರ ಆರೋಪಿಗಳಾದ 3) ಜಾವೇದ್ ಪ್ರಾಯ: 25 ವರ್ಷ, ತಂದೆ: ಬಾಷಾ ಸಾಹೇಬ್, ವಾಸ: ನಂಬ್ರ 4-62, ಹೊಸತೋಟ, ಕೊಳ, ಮಲ್ಪೆ, ಕೊಡವೂರು ಗ್ರಾಮ ಮತ್ತು ಅಂಚೆ, ಉಡುಪಿ ತಾಲೂಕು 4) ಅಶ್ರಫ್ ಪ್ರಾಯ: 34 ವರ್ಷ, ತಂದೆ: ಅಬ್ಬಾಸ್ ಬ್ಯಾರಿ, ವಾಸ: ಬದ್ರಿಯಾ ಮಂಜಿಲ್, ವಿನಯ ನಗರ, ಬೆಳಪು ಮಸೀದಿ ಬಳಿ, ಬೆಳಪು ಗ್ರಾಮ ಮತ್ತು ಅಂಚೆ, ಉಡುಪಿ ತಾಲೂಕು 5) ಇಲಾಹಿದ್ @ ಮಂಜೂರ್ ಇಲಾಹಿದ್ ಪ್ರಾಯ: 24 ವರ್ಷ, ತಂದೆ: ಇಕ್ಬಾಲ್, ವಾಸ: 5 ನೇ ಕ್ರಾಸ್, ಸಂತೋಷ ನಗರ, ಹೆಮ್ಮಾಡಿ ಗ್ರಾಮ ಮತ್ತು ಅಂಚೆ, ಕುಂದಾಪುರ ತಾಲೂಕು ರವರು 6) ರವಿಚಂದ್ರ ಎನ್ @ ರವಿ ಪ್ರಾಯ: 41 ವರ್ಷ, ತಂದೆ: ನಾಗರಾಜ, ವಾಸ: ಅಯ್ಯಪ್ಪ ಕಂಪೌಂಡ್, ನಂದನವನ, ಕೆರ್ಗಲ್ ಅಂಚೆ ಮತ್ತು ಗ್ರಾಮ, ಕುಂದಾಪುರ ತಾಲೂಕು 7) ಸುಮಂತ ಕುಮಾರ ಪ್ರಾಯ: 24 ವರ್ಷ, ತಂದೆ: ರಾಮಚಂದ್ರ, ವಾಸ ಕೆ.ಎಸ್ ನಿಲಯ, ಕಿರಿಮಂಜೇಶ್ವರ ಅಂಚೆ ಮತ್ತು ಗ್ರಾಮ, ಕುಂದಾಪುರ ತಾಲೂಕು ಪ್ರಕರಣದ ಫಿರ್ಯಾದಿದಾರರಾದ ದಿಲೀಪರವರಿಗೆ ಹೆದರಿಸಿ ಮಣಿಪಾಲ ಡೌನ್‌ಟೌನ್‌ ಬಾರ್‌ ಬಳಿ ಬಸ್ಸಿನಿಂದ ಇಳಿಸಿ ಬಲವಂತವಾಗಿ ಆರೋಪಿ ಇರ್ಫಾನ್‌ ತಂದಿದ್ದ ಕಾರಿನಲ್ಲಿ ಕುಳ್ಳಿರಿಸಿ ಅಪಹರಣ ಮಾಡಿಕೊಂಡು ಹೋಗಿ ದರೋಡೆ ಮಾಡಿರುತ್ತಾರೆ. ಆರೋಪಿ ಇಲಾಹಿದ್ ನೈಜ ಪಿಸ್ತೂಲ್ ನಂತೆ ಇರುವ ಆಟಿಕೆಯ ಪಿಸ್ತೂಲ್ ನ್ನು ದಿಲೀಪರವರಿಗೆ ತೋರಿಸಿ ಪೊಲೀಸ್ ಎಂಬುದಾಗಿ ಹೆದರಿಸಿರುತ್ತಾನೆ.

ಈ ಕಾರ್ಯಾಚರಣೆಯನ್ನು ಪೊಲೀಸ್ ಅಧೀಕ್ಷಕರಾದ ಶ್ರೀ ಕೆ.ಟಿ. ಬಾಲಕೃಷ್ಣ ಐಪಿಎಸ್ ರವರ ನಿರ್ದೇಶನದಲ್ಲಿ,  ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಎನ್ ವಿಷ್ಣುವರ್ಧನ, ಕೆಎಸ್‌ಪಿಎಸ್ ಮತ್ತು ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಎಸ್.ಜೆ ಕುಮಾರಸ್ವಾಮಿ ರವರ ಮಾರ್ಗದರ್ಶನದಲ್ಲಿ ಡಿ.ಸಿ.ಐ.ಬಿ ಘಟಕದ ಪೊಲೀಸ್ ನಿರೀಕ್ಷಕ ಸಂಪತ್ ಕುಮಾರ್ ಎ, ಶ್ರೀ ಶ್ರೀಕಾಂತ್‌, ಸಿಪಿಐ ಬ್ರಹ್ಮಾವರ ವೃತ್ತ, ಶ್ರೀ ವಿ.ಎಸ್‌. ಹಾಲಮೂರ್ತಿ, ಸಿಪಿಐ ಕಾಪು ವೃತ್ತ, ಶ್ರೀ ವಿನಾಯಕ ಬಿಲ್ಲವ, ಪಿಎಸ್‌ಐ ಹಿರಿಯಡ್ಕ ಠಾಣೆ, ಶ್ರೀ ಸತೀಶ್, ಪಿಎಸ್‌ಐ ಪಡುಬಿದ್ರಿ ಠಾಣೆ, ರವರು ನಡೆಸಿರುತ್ತಾರೆ. ಶ್ರೀ ಶ್ರೀಧರ ನಂಬಿಯಾರ್‌ , ಎಎಸ್‌ಐ,ಕಾಪು ಠಾಣೆ, ಡಿಸಿಐಬಿ ಘಟಕದ ಎ.ಎಸ್.ಐ. ರೊಸಾರಿಯೊ ಡಿ’ಸೋಜ ಮತ್ತು ಸಿಬ್ಬಂದಿಯವರಾದ ರವಿಚಂದ್ರ, ಚಂದ್ರ ಶೆಟ್ಟಿ, ರಾಮು ಹೆಗ್ಡೆ, ಸಂತೋಷ ಕುಂದರ್, ಸುರೇಶ. ಕೆ, ರಾಘವೇಂದ್ರ ಉಪ್ಪುಂದ, ಪ್ರವೀಣ, ಶಿವಾನಂದ, ರಾಜ್‌ಕುಮಾರ್ ಬೈಂದೂರು, ದಯಾನಂದ ಪ್ರಭು, ಚಾಲಕ ರಾಘವೇಂದ್ರ, ಆರ್‌ಡಿಸಿ ವಿಭಾಗದ ಶಿವಾನಂದ ಶೆಟ್ಟಿ, ನಿತಿನ್‌, ದಿನೇಶ  ರವರು ಸಹಕರಿಸಿರುತ್ತಾರೆ.

No Comments

Leave A Comment