Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಸಿಸಿಬಿ ಪೊಲೀಸ್‌ ಕಾರ್ಯಾಚರಣೆ 1,000, 500 ಮುಖ ಬೆಲೆಯ 1.28 ಕೋಟಿ ವಶ: ಇಬ್ಬರ ಬಂಧನ


ಬೆಂಗಳೂರು: 
ಸಿಸಿಬಿ ಪೊಲೀಸರು ಗುರುವಾರ ನಗರದಲ್ಲಿ ಕಾರ್ಯಾಚರಣೆ ನಡೆಸಿದ್ದು, ಚಲಾವಣೆಯಿಂದ ಹಿಂಪಡೆದ 1,000, 500ರ ಮುಖ ಬೆಲೆಯ 1.28 ಕೋಟಿ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ.

ರಿಯಲ್‌ ಎಸ್ಟೇಟ್‌ ಉಧ್ಯಮಿಗಳಾದ ಕೋಣನಕುಂಟೆಯ ಜಮ್ಮಿ ರಾಹುಲ್‌(34 ವರ್ಷ), ಉತ್ತರ ಕನ್ನಡದ ಹೊನ್ನಾವರದ ಅಜಯ್‌(26 ವರ್ಷ) ಬಂಧಿತರು.

ರಿಯಲ್‌ ಎಸ್ಟೇಟ್‌ ಉದ್ಯಮಿಗಳಾದ ಇಬ್ಬರೂ ಶೇಷಾದ್ರಿಪುರಂನ ಅಪಾರ್ಟ್‌ ಮೆಂಟ್‌ವೊಂದರಲ್ಲಿ ವಾಸವಿದ್ದರು. ಉದ್ಯಮದಲ್ಲಿ ತಾವು ಗಳಿಸಿದ ಹಣವನ್ನು ನೋಟು ಮಾನ್ಯೀಕರಣದ ಬಳಿಕ ಅವರು ಬದಲಾವಣೆ ಮಾಡಿರಲಿಲ್ಲ. ಅಪಾರ್ಟ್‌ಮೆಂಟ್‌ನಲ್ಲಿಯೇ ಇಟ್ಟುಕೊಂಡಿದ್ದರು.

ಮಧ್ಯವರ್ತಿ ಮೂಲಕ ಶೇಕಡಾ 58ರಷ್ಟು ಕಮಿಷನ್‌ಗೆ ನಗದು ಬದಲಾಯಿಸಲು ಸಿದ್ಧತೆ ನಡೆಸಿದ್ದರು. ಮಾಹಿತಿ ಲಭ್ಯವಾದ ಮೆರೆಗೆ ಸಿಸಿಬಿ ಪೊಲೀಸರು, ಅವರ ಬಳಿ ಇದ್ದ 1.28 ಕೋಟಿಯನ್ನು ವಶಕ್ಕೆ ಪಡೆದು, ಇಬ್ಬರನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

No Comments

Leave A Comment