Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ಬ್ರಿಟನ್ ಸಂಸತ್ತಿನ ಮೇಲೆ ಉಗ್ರರ ದಾಳಿ: ಐವರ ಸಾವು, 40 ಮಂದಿಗೆ ಗಾಯ

ಲಂಡನ್: ಅಧಿವೇಶನ ನಡೆಯುತ್ತಿದ್ದ ವೇಳೆ ಬ್ರಿಟನ್‌ ಪಾರ್ಲಿಮೆಂಟ್ ಮುಂಭಾಗದಲ್ಲಿ ಪಾದಚಾರಿಗಳ ಸೋಗಿನಲ್ಲಿ ಬಂದ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿ ಪೊಲೀಸ್‌ ಅಧಿಕಾರಿಗಳು ಸೇರಿದಂತೆ ಐವರನ್ನು ಹತ್ಯೆ ಮಾಡಿದ್ದಾರೆ.

ಸಂಸತ್ ಒಳಗೆ ಸುಮಾರು 200ಕ್ಕೂ ಹೆಚ್ಚು ಸದಸ್ಯರು ಸೇರಿದಂತೆ ಪ್ರಧಾನಿಯೂ ಭಾಗಿಯಾಗಿದ್ದರು. ಅಧಿವೇಶನ ನಡೆಯುತ್ತಿದ್ದ ವೇಳೆ ಹೊರಭಾಗದಲ್ಲಿ ಈ ದಾಳಿ ನಡೆದಿದೆ. ದಾಳಿಯಲ್ಲಿ ಐವರು ಸಾವನ್ನಪ್ಪಿದ್ದು, ಪೊಲೀಸರು ಸೇರಿದಂತೆ 40ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.

ದಾಳಿಯಲ್ಲಿ ಸಾವನ್ನಪ್ಪಿದ್ದ ಐವರಲ್ಲಿ ಇಬ್ಬರು ಪೊಲೀಸ್‌ ಅಧಿಕಾರಿಗಳು ಮತ್ತು ಇಬ್ಬರು ಪಾದಚಾರಿಗಳು ಎನ್ನಲಾಗಿದೆ. ಉಗ್ರರ ದಾಳಿ ವೇಳೆ ವೆಸ್ಟ್​ಮಿನ್​ಸ್ಟ್ಟ್ ಪ್ರದೇಶದಲ್ಲಿದ್ದ ಪ್ರಧಾನಿ ಥೆರೆಸಾ ಮೇ ಅವರನ್ನು ಭದ್ರತಾ ಸಿಬ್ಬಂದಿ ಸುರಕ್ಷಿತವಾಗಿ ಕಾರಿನಲ್ಲಿ ಬೇರೆಡೆ ಕಳಿಸಿದ್ದಾರೆ. ಪ್ರಧಾನಿ ಸುರಕ್ಷಿತವಾಗಿದ್ದು, ಅವರ ಭದ್ರತೆ ಹೆಚ್ಚಿಸಲಾಗಿದೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ. ಇನ್ನು ಸಂಸತ್‌ನಲ್ಲಿದ್ದ ಸದಸ್ಯರು ಸುರಕ್ಷಿತವಾಗಿದ್ದಾರೆ. ಘಟನೆಯನ್ನು ಬ್ರಿಟನ್ ಪ್ರಧಾನಿ ಖಂಡಿಸಿದ್ದಾರೆ.

ಇದು ಉಗ್ರರ ಕೃತ್ಯ ಎಂದು ಶಂಕಿಸಲಾಗಿದೆ, ಆದರೆ ಇದುವರೆಗೂ ಯಾವುದೇ ಉಗ್ರ ಸಂಘಟನೆಗಳು ಘಟನೆಯ ಹೊಣೆಗಾರಿಕೆ ಹೊತ್ತಿಲ್ಲ.

ಹೌಸ್ ಆಫ್ ಕಾಮನ್ಸ್​ನಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಹೊರಗೆ ಹಠಾತ್ ಗುಂಡಿನ ಸದ್ದು ಕೇಳಿ ಬಂದಾಗ ಮುಂಜಾಗ್ರತಾ ಕ್ರಮವಾಗಿ ಸಂಸತ್ ಭವನದ ಪ್ರವೇಶದ್ವಾರವನ್ನು ಬಂದ್ ಮಾಡಲಾಗಿತ್ತು. ಸಂಸತ್ ಕಟ್ಟಡದೊಳಗಿದ್ದ ಸುಮಾರು 200 ಸಂಸದರು ಹಾಗೂ ಪತ್ರಕರ್ತರನ್ನು ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಸುರಕ್ಷತೆಯಿಂದ ಕರೆದೊಯ್ಯಲಾಗಿದೆ. ನಾಳೆ ಮತ್ತೆ ಎಂದಿನಂತೆ ಕಲಾಪ ಆರಂಭವಾಗಲಿದೆ.

No Comments

Leave A Comment