Log In
BREAKING NEWS >
ಪಕ್ಷೇತರ ಅಭ್ಯರ್ಥಿಯಾಗಿ ಉಡುಪಿ ಶಿರೂರು ಶ್ರೀನಾಮಪತ್ರ ಸಲ್ಲಿಕೆ.....ಏಪ್ರಿಲ್ 22ರ೦ದು ಉಡುಪಿಯ ಕಲ್ಸ೦ಕದ ರಾಯಲ್ ಗಾರ್ಡನ್ ನಲ್ಲಿ ಬೃಹತ್ ಕಾ೦ಗ್ರೆಸ್ ಕಾರ್ಯಕರ್ತರ ಸಮಾವೇಶ-23ರ೦ದು ಪ್ರಮೋದ್ ಮಧ್ವರಾಜ್ ನಾಮಪತ್ರಸಲ್ಲಿಕೆ...

ಅವಹೇಳನಕಾರಿ ಹೇಳಿಕೆ ಆರೋಪ: ಸಂಸದ ಪ್ರತಾಪ್ ಸಿಂಹ ವಿರುದ್ದ ಕಾರ್ಯಕರ್ತೆ ಪ್ರಭಾ ಬೆಳವಂಗಲ ದೂರು ದಾಖಲು

 ಬೆಂಗಳೂರು: ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ್ ವಿರುದ್ಧ ಕಾರ್ಯಕರ್ತೆ ಮತ್ತು ಪ್ರಗತಿ ಪರ ಚಿಂತಕಿ ಪ್ರಭಾ ಬೆಳವಂಗಲ ದೂರು ದಾಖಲಿಸಿದ್ದಾರೆ.

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ವಿರುದ್ಧ ಅಶ್ಲೀಲ ಪೋಸ್ಟ್ ಹಾಕಿದ್ದ ಚಿಂತಕಿ ಪ್ರಭಾ ಬೆಳವಂಗಲ ವಿರುದ್ಧ ಬಿಜೆಪಿ ಯುವ ಮೋರ್ಚಾ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿತ್ತು.

ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಪ್ರಭಾ ಪ್ರವೀಣ್ ಸೂದ್ ಅವರಿಗೆ ದೂರು ನೀಡಿದ್ದಾರೆ.

ಪ್ರತಾಪ್ ಸಿಂಹ್ ವಿಡಿಯೋ ಒಂದರಲ್ಲಿ ತಮ್ಮನ್ನು ಅವಹೇಳನ ಮಾಡಿದ್ದಾರೆ ಎಂದು ಪ್ರಭಾ ದೂರಿದ್ದಾರೆ. ಪ್ರಭಾ ವಿರುದ್ಧ ನಾನು 100 ದೂರುಗಳನ್ನು ದಾಖಲಿಸಬಲ್ಲೆ, ಕೆಟ್ಟ ವಿಡಿಯೋ ನೋಡಬೇಕೆಂಬ ಬಯಕೆಯಿದ್ದರೇ ಪ್ರಭಾ ಅವರು ಉತ್ತರ ಪ್ರದೇಶದವರೆಗೂ ಹೋಗುವ ಅವಶ್ಯಕತೆಯಿರಲಿಲ್ಲ, ಬಾಗಲಕೋಟೆಗೆ ಹೋಗಿದ್ದರೇ ಸಾಕಾಗಿತ್ತು ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ರಾಜಕಾರಣಿಗಳ ಆ್ಯಂಟಿಚೇಂಬರ್ ನಲ್ಲಿ ಏನು ನಡೆಯುತ್ತೆ ಎಂಬುದರ ಬಗ್ಗೆ ಪ್ರಭಾ ಅವರಿಗೆ ಕುತೂಹಲ ಹೆಚ್ಚು ಎಂದು ಅನ್ನಿಸುತ್ತದೆ. ಬಾಗಲಕೋಟೆಗೆ ಹೋಗಿ ಅಲ್ಲಿ ಮೇಟಿ ಅವರ ಚೇಂಬರ್ ಗೆ ಹೋಗಿದ್ದರೇ ಲೈವ್ ವಿಡಿಯೋ ನೋಡಬಹುದಿತ್ತು, ಅವರ ಭಾಷೆಯಲ್ಲಿ ಹೇಳಬಹುದಾದರೇ ಮೇಟಿ ಅವರ ಕಚೇರಿಯಲ್ಲೇ ಪ್ರಭಾ ಅವರು ಅನುಭವ ಪಡೆಯಬಹುದಿತ್ತು ಎಂದು ಪ್ರತಾಪ್ ಸಿಂಹ ವಿಡಿಯೋದಲ್ಲಿ ಹೇಳಿದ್ದಾರೆ ಎನ್ನಲಾಗಿದೆ.

ಇನ್ನು ಪ್ರತಾಪ್ ಸಿಂಹ ಹೇಳಿಕೆ ವಿರುದ್ಧ ಲೇಖಕಿ ಲೀಲಾ ಸಂಪಿಗೆ ಕಿಡಿಕಾರಿದ್ದಾರೆ. ಪ್ರಭಾ ಬೆಳವಂಗಲ ಫೇಸ್ ಬುಕ್ ನಲ್ಲಿ ಹಾಕಿದ್ದ ಪೋಸ್ಟ್ ನಕಲಿ ಎಂದು ತಿಳಿದ ಮೇಲೆ ಅದನ್ನು ತೆಗೆದು ಹಾಕಿದ್ದಾರೆ, ಸಂಸದರು ನೂರಲ್ಲ ಸಾವಿರ ದೂರು ದಾಖಲಿಸಲಿ, ಆದರೆ ಒಬ್ಬ ಸಂಸದರಾಗಿದ್ದುಕೊಂಡು ಮಹಿಳೆಯ ಬಗ್ಗೆ ಇಷ್ಟೊಂದು ನಿಕೃಷ್ಟವಾಗಿ ಮಾತನಾಡಬಾರದು ಎಂದು ಖಂಡಿಸಿದ್ದಾರೆ.

No Comments

Leave A Comment