Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ

6ನೇ ರಾಷ್ಟ್ರೀಯ ಛಾಯಾಗ್ರಹಣ ಪ್ರಶಸ್ತಿ ಪ್ರಕಟ: ರಘು ರೈಗೆ ಜೀವಮಾನ ಸಾಧನೆ ಪ್ರಶಸ್ತಿ

ನವದೆಹಲಿ: 6ನೇ ರಾಷ್ಟ್ರೀಯ ಛಾಯಾಗ್ರಹಣ ಪ್ರಶಸ್ತಿ ಪ್ರಕಟವಾಗಿದ್ದು, ಖ್ಯಾತ ಛಾಯಾಗ್ರಾಹಕ ರಘು ರೈ ಅವರು ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

1965ರಲ್ಲಿ ತಮ್ಮ ವೃತ್ತಿಪರ ಛಾಯಾಗ್ರಹಣ ಆರಂಭಿಸಿದ ರಘು ರೈ ಅವರು, 1972ರಲ್ಲಿ ಪದ್ಮ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು. ಅಂತೆಯೇ ಛಾಯಾಗ್ರಹಣ ಕಲೆಯಲ್ಲಿ ಅಗಾಧ ಅನುಭವ ಹೊಂದಿರುವ ರಘುರೈ ಅವರು, ಸುಮಾರು 18  ಪುಸ್ತಕಗಳನ್ನು ಬರೆದಿದ್ದಾರೆ. ಇನ್ನು 1992ರಲ್ಲಿ ಅಮೆರಿಕದ ಪ್ರತಿಷ್ಠಿತ ವರ್ಷದ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿಗೂ ರಘುರೈ ಭಾಜನರಾಗಿದ್ದರು.

ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಈ ಬಗ್ಗೆ  ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿಗೆ ಭಾಜನಾರಾದ ರಘುರೈ ಅವರಿಗೆ ಶುಭಾಷಯ ತಿಳಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಅಂತೆಯೇ  ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಛಾಯಾಗ್ರಹಣದ ಮೂಲಕ ಜಾಗೃತಿ ಮೂಡಿಸಬಹುದಾಗಿದ್ದು, ಛಾಯಾ ಗ್ರಹಣ ಉತ್ತಮ ಆಡಳಿತ ಪ್ರಸರಣದ ಮಾರ್ಗ ಕೂಡ ಆಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಉಳಿದಂತೆ ಪ್ರಶಸ್ತಿಗೆ ಭಾಜನರಾದ ಪ್ರಮುಖ ಛಾಯಾಗ್ರಾಹಕ ಹೆಸರು ಇಂತಿದೆ.

ವರ್ಷದ ಹವ್ಯಾಸಿ ಛಾಯಾಗ್ರಾಹಕ ಪ್ರಶಸ್ತಿ-ರವೀಂದರ್ ಕುಮಾರ್ವರ್ಷದ ವತ್ತಿಪರ ಛಾಯಾಗ್ರಾಹಕ ಪ್ರಶಸ್ತಿ-ಕೆಕೆ ಮುಸ್ತಾಫಾವಿಶೇಷ ಪ್ರಶಸ್ತಿ (ವೃತ್ತಿಪರ ಛಾಯಾಗ್ರಾಹಣ ವಿಭಾಗ)-ಒಪಿ ಸೋನಿವಿಶೇಷ ಪ್ರಶಸ್ತಿ (ವೃತ್ತಿಪರ ಛಾಯಾಗ್ರಾಹಣ ವಿಭಾಗ)-ಜಿ ನಾಗಶ್ರೀನಿವಾಸುವಿಶೇಷ ಪ್ರಶಸ್ತಿ (ವೃತ್ತಿಪರ ಛಾಯಾಗ್ರಾಹಣ ವಿಭಾಗ)-ದಿಪಾಯನ್ ಬಿಹಾರವಿಶೇಷ ಪ್ರಶಸ್ತಿ (ವೃತ್ತಿಪರ ಛಾಯಾಗ್ರಾಹಣ ವಿಭಾಗ)-ಚ ನಾರಾಯಣ ರಾವ್ವಿಶೇಷ ಪ್ರಶಸ್ತಿ (ವೃತ್ತಿಪರ ಛಾಯಾಗ್ರಾಹಣ ವಿಭಾಗ)-ಅತುಲ್ ಚೌಬೆ

 

 

 

No Comments

Leave A Comment