Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ರಾಂಚಿಯಲ್ಲಿ ಗುಂಡಿನ ಮಳೆ: ಮಾಜಿ ಮೇಯರ್‌ ಸೇರಿ ನಾಲ್ವರ ಭೀಕರ ಹತ್ಯೆ

ರಾಂಚಿ : ನಗರದಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಧನ್‌ಬಾದ್‌ನ ಮಾಜಿ ಮೇಯರ್‌ ನೀರಜ್‌ ಸಿಂಗ್‌ ಮತ್ತು ಮತ್ತು ನಾಲ್ವರು ಬರ್ಬರವಾಗಿ ಹತ್ಯೆಗೈದಿರು ಭೀಕರ ಘಟನೆ ಮಂಗಳವಾರ ಸಂಜೆ ನಡೆದಿದೆ.

ನೀರಜ್‌ ಸಿಂಗ್‌ ಅವರು ಬರುತ್ತಿದ್ದ ಕಾರನ್ನು ಗುರಿಯಾಗಿರಿಸಿಕೊಂಡು  ಎಕೆ 47 ಧಾರಿಯೊಬ್ಬ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು, ಕಾರಿನಲ್ಲಿದ್ದ ಮಾಜಿ ಉಪ ಮೆಯರ್‌ ಅಶೋಕ್‌ ಯಾದವ್‌ , ಕಾರಿನ ಚಾಲಕ ಮತ್ತು ಗನ್‌ಮ್ಯಾನ್‌ ದಾರುಣವಾಗಿ ಸಾವನ್ನಪ್ಪಿದ್ದಾರೆ. ನಾಲ್ವರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದಾಗಲೇ ಕೊನೆಯುಸಿರೆಳೆದಿದ್ದರು.

ನೀರಜ್‌ ಸಿಂಗ್‌ ಅವರ ದೇಹದಲ್ಲಿ 17 ಗುಂಡುಗಳು ಹೊಕ್ಕಿದ್ದು ,ಸ್ಥಳದಲ್ಲಿ 50 ಗುಂಡುಗಳು ಪತ್ತೆಯಾಗಿರುವುದು ದಾಳಿಯ ಭೀಕರತೆಯನ್ನು ಸೂಚಿಸುತ್ತಿತ್ತು.

ದಾಳಿಕೋರರ ಪತ್ತೆಯಾಗಿದೆ ವಿಶೇಷ ತನಿಖಾ ತಂಡ ಮತ್ತು ಪೊಲೀಸರ ತಂಡಗಳು ವ್ಯಾಪಕ ಶೋಧ ನಡೆಸುತ್ತಿವೆ.

No Comments

Leave A Comment