Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಆದಿಚುಂಚನಗಿರಿಯಲ್ಲಿ ನಟಿ ಅಮೂಲ್ಯ ಮದುವೆ

ಬೆಂಗಳೂರು: ಚಿತ್ರನಟಿ ಅಮೂಲ್ಯ ಅವರ ವಿವಾಹ ಮೇ 12ರಂದು ಮಂಡ್ಯದ ಆದಿಚುಂಚನಗಿರಿ ಕ್ಷೇತ್ರದ ಕಾಲಭೈರವೇಶ್ವರ ಸ್ವಾಮಿ ದೇಗುಲದಲ್ಲಿ ನೆರವೇರಲಿದೆ. ಆದಿಚುಂಚನಗಿರಿ ಕ್ಷೇತ್ರದ ಮಠಾಧೀಶ ಶ್ರೀ ನಿರ್ಮಲಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅಮೂಲ್ಯ, ಜಗದೀಶ್‌ ಕೈಹಿಡಿಯಲಿದ್ದಾರೆ.

ಮೇ 11ರಂದು ಚಪ್ಪರದೂಟ ಕಾರ್ಯಕ್ರಮ ಜರುಗಲಿದೆ. ಮೇ 16ರಂದು ಆರತಕ್ಷತೆ ಕಾರ್ಯಕ್ರಮವನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಏರ್ಪಡಿಸಲಾಗಿದ್ದು, ಚಿತ್ರರಂಗದ ಗಣ್ಯಾತಿಗಣ್ಯರು ಪಾಲ್ಗೊಳ್ಳುವರು.

21ರಂದು ಬೀಗರೂಟ ಆಯೋಜಿಸಲಾಗಿದೆ. ಮಾಜಿ ಕಾರ್ಪೋರೇಟರ್‌ ಅವರ ಪುತ್ರ  ಜಗದೀಶ್‌ ಲಂಡನ್ನಿನಲ್ಲಿ ಎಂಬಿಎ ಪದವಿ ಮುಗಿಸಿದವರು. ಕೆಲ ದಿನಗಳ ಹಿಂದಷ್ಟೇ ಪರಸ್ಪರ ವಜ್ರದುಂಗುರ ಬದಲಿಸಿ ನಿಶ್ಚಿತಾರ್ಥ ನಡೆದಿತ್ತು.

No Comments

Leave A Comment