Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಉಡುಪಿ ಒಳಕಾಡಿನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ…

ಉಡುಪಿ ಒಳಕಾಡಿನ ಕಾಶೀಮಠದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಶನಿವಾರ ಸಂಜೆ ಗೋಧೂಳಿ ಮುಹೂರ್ತದಲ್ಲಿ ಶ್ರೀದೇವಿ-ಭೂದೇವಿ ಸಹಿತ ಶ್ರೀನಿವಾಸ ಕಲ್ಯಾಣೋತ್ಸವ ವಿಜೃಂಭಣೆಯಿಂದ ಜರುಗಿತು.

ಶ್ರೀನಿವಾಸ ನಿಗಮ ಪಾಠಶಾಲೆಯ ಪ್ರಾಂಶುಪಾಲರಾದ ಶೃಂಗೇರಿ ಸುಧಾಕರ ಭಟ್ ಇವರ ಮಾರ್ಗದರ್ಶನದಲ್ಲಿ ಉಡುಪಿಯ ಚೇಂಪಿ ರಾಮಚಂದ್ರ ಅನಂತ ಭಟ್ ಮತ್ತು ನರಸಿಂಹ ಕಿಣಿ ಕುಟುಂಬಸ್ತರಿಂದ ಸೇವಾ ರೂಪದಲ್ಲಿ ಲೋಕ ಕಲ್ಯಾಣಾರ್ಥವಾಗಿ ಶ್ರೀನಿವಾಸ ಕಲ್ಯಾಣೋತ್ಸವವು ಭಕ್ತಿ ಸಡಗರದಿಂದ ಆಚರಿಸಲಾಯಿತು.

ಶ್ರೀ ದೇವರ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ, ಗುರು ಗಣಪತಿ ಪೂಜೆ, ಜಿ.ಎಸ್. ಬಿ. ಸಮಾಜದ ಕಾಶೀಮಠ, ಗೋಕರ್ಣಮಠ, ಕೈವಲ್ಯಮಠದ ಗುರುವಿನ ಸ್ಮರಣೆಯೊಂದಿಗೆ ಶ್ರೀ ದೇವರ ದಿಬ್ಬಣವನ್ನು ಸ್ವಾಗತಿಸಿ, ಶ್ರೀನಿವಾಸ ದೇವರನ್ನು ಮಂಟಪಕ್ಕೆ ಕರೆತಂದು, ವರೋಪಚಾರ ಮಾಡಿ, ಶ್ರೀದೇವಿ-ಭೂದೇವಿರನ್ನು ಅಲಂಕರಿಸಿ, ಮಂಟಪಕ್ಕೆ ಕರೆತಂದು ವೇದಘೋಷ, ಭಜನೆ, ಮಂಗಳ ವಾದ್ಯಗಳೊಂದಿಗೆ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವವು ಜರುಗಿತು. ಶ್ರೀ ದುರ್ಗಾ ಭಜನಾ ಮಂಡಳಿ ಉಡುಪಿ ಇವರಿಂದ ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು. ಶ್ರೀ ಶ್ರೀನಿವಾಸ ದೇವರ ಸನ್ನಿಧಿಯಲ್ಲಿ ಅಷ್ಠಾವಧಾನ ಸೇವೆ, ಮಹಾಮಂಗಳಾರತಿಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು.

ಸಮಾರಂಭದಲ್ಲಿ ರಾಜೇಂದ್ರ ಭಟ್, ಶರತ್ ಭಟ್, ರಾಮದಾಸ ಭಟ್ ಮತ್ತು ಜಿ.ಎಸ್. ಬಿ. ಸಮಾಜದ ಸಾವಿರಾರು ಭಕ್ತರು ಕಲ್ಯಾಣೋತ್ಸವಕ್ಕೆ ಪ್ರಸಾದವನ್ನು ಸ್ವೀಕರಿಸಿ ಧನ್ಯರಾದರು.

No Comments

Leave A Comment