Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

8 ಮುಸ್ಲಿಂ ರಾಷ್ಟ್ರಗಳ ಪ್ರಯಾಣಿಕರ ಎಲೆಕ್ಟ್ರಿಕ್ ವಸ್ತುಗಳ ಮೇಲೆ ಅಮೆರಿಕ ವಿಮಾನಗಳಲ್ಲಿ ನಿಷೇಧ!

ವಾಷಿಂಗ್ಟನ್: ಮಹತ್ವದ ಬೆಳವಣಿಗೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ 8 ಮುಸ್ಲಿಂ ರಾಷ್ಟ್ರಗಳ ಪ್ರಯಾಣಿಕರು ವಿಮಾನಗಳಲ್ಲಿ ಎಲೆಕ್ಟ್ರಿಕ್ ವಸ್ತುಗಳನ್ನು ತರುವಂತಿಲ್ಲ ಎಂದು ಹೇಳಿ ನಿಷೇಧ ಹೇರಿದೆ.

ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದ ಒಟ್ಟು 8 ರಾಷ್ಟ್ರಗಳ ವಿಮಾನ ಪ್ರಯಾಣಿಕರಿಗೆ ಈ ಹೊಸ ನಿಷೇಧ ಅನ್ವಯಿಸಲಿದ್ದು, ಈ ದೇಶದ ಪ್ರಯಾಣಿಕರು ಮೊಬೈಲ್ ಗಿಂತ ದೊಡ್ಡದಾದ ಯಾವುದೇ ರೀತಿಯ ಎಲೆಕ್ಟ್ರಿಕ್ ವಸ್ತುಗಳನ್ನು  ವಿಮಾನದಲ್ಲಿ ತರುವಂತಿಲ್ಲ ಎಂದು ಅಮೆರಿಕ ಸರ್ಕಾರ ಹೇಳಿದೆ.

ಅಮೆರಿಕ ಸರ್ಕಾರದ ಈ ನಿಷೇಧದಿಂದಾಗಿ ಈ 8 ದೇಶಗಳ ಪ್ರಯಾಣಿಕರು ವಿಮಾನದಲ್ಲಿ ಲ್ಯಾಪ್ ಟಾಪ್, ಐಪಾಡ್, ಕ್ಯಾಮೆರಾ ಸೇರಿದಂತೆ ವಿವಿಧ ರೀತಿಯ  ಉಪಕರಣಗಳನ್ನು ವಿಮಾನದೊಳಗೆ ತರುವಂತಿಲ್ಲ.ಈಗಾಗಲೇ ಅಮೆರಿಕದ ಪ್ರಮುಖ 12 ವಿಮಾನಯಾನ ಸಂಸ್ಥೆಗಳಿಗೆ ಈ ಬಗ್ಗೆ ಸೂಚನೆ ರವಾನಿಸಲಾಗಿದ್ದು, ಪ್ರಮುಖವಾಗಿ ಅಮೆರಿಕದಿಂದ ಈ 8 ರಾಷ್ಟ್ರಗಳಿಗೆ ತಡೆರಹಿತವಾಗಿ ಪ್ರಯಾಣಿಸುವ ವಿಮಾನಗಳಲ್ಲಿ ಈ ನಿಯಮ ಜಾರಿಗೆ  ಬರಲಿದೆ.

ಜೋರ್ಡಾನ್, ಈಜಿಪ್ಟ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್  ರಾಷ್ಟ್ರಗಳು ಕೂಡ ಈ 8 ರಾಷ್ಟ್ರಗಳ ಪಟ್ಟಿಯಲ್ಲಿ ಸೇರಿದೆ ಎಂದು ಹೇಳಲಾಗುತ್ತಿದೆ.

ಭದ್ರತಾ ಕಾರಣಗಳಿಂದಾಗಿ ಅಮೆರಿಕ ಸರ್ಕಾರ ಈ ನಿರ್ಣಯ ಕೈಗೊಂಡಿದೆ ಎಂದು ಹೇಳಲಾಗುತ್ತಿದ್ದರೂ ಈ ಬಗ್ಗೆ ಅಮೆರಿಕ ಅಧಿಕಾರಿಗಳು ಯಾವುದೇ ರೀತಿಯ ಅಧಿೃಕೃತ ಪ್ರಕಟಣೆ ನೀಡಿಲ್ಲ.

No Comments

Leave A Comment